ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂತು ನೋಡಿ ಬಹುದೊಡ್ಡ ಕೊಡುಗೆ!. ಆತ್ಮೀಯ ಅಲ್ಪಸಂಖ್ಯಾತ ಮಿತ್ರರೇ,,, ನೀವೇನಾದರೂ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ “ಯು ಪಿ ಎಸ್ (Union Public Service Commission) ಸಿ ನಾಗರೀಕ ಸೇವೆ ಮತ್ತು ಕೆ ಎಸ್ ಎಸ್ (Karnataka Administrative Service) “ ಪರೀಕ್ಷೆಗೆ ತರಬೇತಿ ನಡೆಸಬೇಕೆಂದು ಯೋಚಿಸುತ್ತಿದ್ದೀರಾ ? ಅಥವಾ ತರಬೇತಿ ಪಡೆಯಲು ಯಾವ ಊರಿಗೆ, ಯಾವ ಸಂಸ್ಥೆಗೆ ಹೋಗಿ ಜಾಯಿನ್ ಆಗಲಿ ಎಂದು ಯೋಚಿಸುತ್ತಿದ್ದೀರಾ ? ಇಲ್ಲಾ ಯು ಪಿ ಎಸ್ ಸಿ ಮತ್ತು ಕೆ ಎಸ್ ಎಸ್ ಕೋಚಿಂಗ್ ಪಡೆವುವಷ್ಟು ಹಣ ನಮ್ಮಲ್ಲಿ ಇಲ್ಲ, ಎಲ್ಲಿಂದ ಹಣ ತರಲಿ ನಾನು ಎಂಬ ಚಿಂತೆ ನಿಮ್ಮ ನೆಮ್ಮದಿಯನ್ನ ಹಾಳು ಮಾಡುತ್ತಿದೆಯೇ ?
UPSC/KAS Free Coaching
ಸ್ನೇಹಿತರೆ ನಿಮಗಾಗಿ ಸರ್ಕಾರ ಅಂದರೆ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗಾಗಿ 2025 26ನೇ ಸಾಲಿನಲ್ಲಿ UPSC ಮತ್ತು KAS ಉಚಿತ ವಸತಿ ಸಹಿತ ತರಬೇತಿ ನೀಡಲು ತೀರ್ಮಾನವನ್ನು ಕೈಗೊಂಡು ಇದೀಗ ಆನ್ಲೈನ್ ಅರ್ಜಿಯನ್ನ ಆರಂಭಿಸಿದೆ. ದೇಶದ ಅಭಿವೃದ್ಧಿಗೆ ನಮ್ಮ ಪಾತ್ರವನ್ನು ನಿಭಾಯಿಸುವುದು ಅಂದರೆ ಮತ ಹಾಕುವುದು ಕಾನೂನು ಪಾಲಿಸುವುದು ಮತ್ತು ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಅಥವಾ ಕರ್ನಾಟಕ ಅಡ್ಮಿನಿ ಸ್ಟೇಟುಸ್ ಸರ್ವಿಸ್ ಹೀಗೆ ಅನೇಕ ಹುದ್ದೆಗಳ ಮೂಲಕ ಸೇವೆ ಮಾಡುವುದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ.
ಭಾರತದ ಆಡಳಿತದಲ್ಲಿ ಉದ್ಯೋಗ ಮಾಡುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ. ಅದರಲ್ಲೂ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಮತ್ತು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಇಂತಹ ಅತ್ಯುತ್ತಮ ಅಧಿಕಾರಿಯಾಗುವುದು ಅಂದರೆ ಸಾಧಾರಣವಾದ ವಿಷಯವಲ್ಲ. ಜನರಿಗೆ ನೇರವಾಗಿ ಸಹಾಯಮಾಡುವ ಅವಕಾಶ ಮತ್ತು ಊರಿನ ಬಡವರಿಗೆ, ವಿದ್ಯಾವಂತರಿಗೆ ಹಾಗೆ ರೈತರಿಗೂ ಸಹ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು ಈ ಸರ್ಕಾರಿ ಅಧಿಕಾರಿಗಳ ಕೆಲಸವಾಗಿರುತ್ತದೆ.
ಮುಖ್ಯವಾಗಿ ಈ ಪರೀಕ್ಷೆಗೆ ಓದುವುದು ಸ್ವಲ್ಪ ಕಷ್ಟವಾಗಬಹುದು ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಓದಲು ಒಳ್ಳೆಯ ಜಾಗ ಬೇಕು ಹಾಗೆ ಹಣವು ಕೂಡ ಅವಶ್ಯಕವಾಗಿದೆ. ಆದರೆ ಇಂದಿನ ದಿನಗಳಲ್ಲಿ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಕೋಚಿಂಗ್ ಕೊಡುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ವಿದ್ಯಾರ್ಥಿಗಳಿಂದ ಆದಷ್ಟು ಹಣವನ್ನ ಕೀಳುತ್ತಿವೆ.
ಇಂತ ವಿಷಯವನ್ನ ಅರಿತುಕೊಂಡ ಸರ್ಕಾರ ಹಣದ ತೊಂದರೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು “2025-26ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಹಜ್ ಭವನದಲ್ಲಿ ಉಚಿತ ವಸತಿ ಮತ್ತು ಉಚಿತ ತರಬೇತಿ ಕೊಡುವ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದೆ ಅಷ್ಟೇ ಅಲ್ಲದೆ ಊಟ, ವಸತಿ ವ್ಯವಸ್ಥೆಯ ಜೊತೆಗೆ ಅನುಭವದ ಶಿಕ್ಷಕರಿಂದ ಉತ್ತಮವಾಗಿ ಮಾರ್ಗದರ್ಶನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮನಾಗಿ ಸಿಗುತ್ತದೆ”.
ಸರ್ಕಾರದ ಈ ಯೋಜನೆಯ ಉದ್ದೇಶವೇನು :-
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವರ್ಗದ ಅಭ್ಯರ್ಥಿಗಳನ್ನ ಎಲ್ಲ ಕ್ಷೇತ್ರದಲ್ಲೂ ಅಂದರೆ ಶಿಕ್ಷಣ ,ಸರ್ಕಾರೀ ಉದ್ಯೋಗ ಹಾಗೆ ಸಮಾಜದಲ್ಲಿ ಪ್ರತಿಯೊಂದರಲ್ಲೂ ಮುಂದೆ ತರಬೇಕು ಎನ್ನುವ ಉದ್ದೇಶದಿಂದ ಈ ಉಚಿತ ಕೋಚಿಂಗ್ ತರಬೇತಿಯನ್ನ ರೂಪಿಸಿದೆ.
- ಬಡ ಮತ್ತು ಮಧ್ಯಮ ವರ್ಗದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದ UPSC ಮತ್ತು KAS ಕೋಚಿಂಗ್ ಫೀಸ್ ಕಟ್ಟಲು ಕಷ್ಟವಾಗುತ್ತದೆ. ಆದ್ದರಿಂದ ಈ ಮಕ್ಕಳಿಗೆ ಉಚಿತ ತರಬೇತಿ ನೀಡುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.
- 2025/26ನೇ ಸಾಲಿನಲ್ಲಿ ಆರಂಭವಾಗುವ ಕೋಚಿಂಗ್ ತರಬೇತಿಯು ದೆಹಲಿ ಮತ್ತು ಹೈದರಾಬಾದ್ ನಂತಹ ಪ್ರತಿಷ್ಠಿತ ಕೇಂದ್ರಗಳ ನುರಿತ ತಜ್ಞರಿಂದ ಮತ್ತು ಅನುಭವಿ ಅಧಿಕಾರಿಗಳಿಂದ ನೇರ ಮಾರ್ಗದರ್ಶನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮನಾಗಿ ಸಿಗುತ್ತದೆ.
- ಇಂದಿನ ಕಾಲದಲ್ಲಿ ಬೆಂಗಳೂರು ನಗರ ಮಾತ್ರ ದುಬಾರಿ ಅಲ್ಲ. ಪ್ರತಿಯೊಂದು ನಗರದಲ್ಲೂ ವಿದ್ಯಾರ್ಥಿಗಳ ಓದುವ ಮನೋಭಾವನೆ ಹೆಚ್ಚಾದಂತೆ ಹಾಗೆ ದೊಡ್ಡ ದೊಡ್ಡ ಅಧಿಕಾರಿಗಳಾಗಬೇಕೆಂದು ಕನಸು ಹೆಚ್ಚುತ್ತಿರುವ ಕಾರಣದಿಂದ ಇತ್ತೀಚಿನ ದಿನದಲ್ಲಿ ಎಲ್ಲಿ ನೋಡಿದರೂ ಅನೇಕ ಕೋಚಿಂಗ್ ಸೆಂಟರ್ ಗಳು ಜನ್ಮತಾಳುತ್ತಿವೆ. ಇವುಗಳು ಕೇವಲ ಕೋಚಿಂಗ್ ನೀಡುತ್ತವೆಯೋ ಇಲ್ಲವೋ ಗೊತ್ತಿಲ್ಲ ಆದರೆ ಕೋಚಿಂಗ್ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣವನ್ನ ವಸೂಲಿ ಮಾಡುತ್ತಿವೆ. ಇದನ್ನ ತಪ್ಪಿಸಲು ಸರ್ಕಾರ 2026ನೇ ವರ್ಷದಲ್ಲಿ ಬಹುದೊಡ್ಡ ಯೋಜನೆಯನ್ನು ಹಾಕಿಕೊಂಡಿದೆ.
- ಈ ತರಬೇತಿ ಕೇವಲ ಎರಡು ಮೂರು ತಿಂಗಳ ತರಬೇತಿ ಅಲ್ಲ ಸುಮಾರು 12 ತಿಂಗಳ ತರಬೇತಿ ಆಗಿರುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಈ ಅವಧಿಯನ್ನ ನೀಡಿರುವಂತದ್ದು ಕಡಿಮೆ ಅವಧಿಯಲ್ಲಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಭಾಗಿಯಾಗಲು ಸಾಧ್ಯವಿಲ್ಲ ಅಂದರೆ ಹೆಚ್ಚಿನ ವಿಷಯವನ್ನು ತಿಳಿಯಲು ಸಾಧ್ಯವಾಗುವುದಿಲ್ಲ ಇಂತಹ ಒಂದು ಅಂಶವನ್ನು ಪರಿಗಣಿಸಿ ಸರ್ಕಾರ ಒಂದು ವಶದ ಉಚಿತ ಕೋಚಿಂಗ್ ಅವಕಾಶ ಕಲ್ಪಿಸಿದೆ.
- ಸರ್ಕಾರ ಇಂತಹ ಕೋಚಿಂಗ್ ಗಳನ್ನ ಒಂದು ನಿರ್ದಿಷ್ಟ ಜಾಗದಲ್ಲಿ ವಿದ್ಯಾರ್ಥಿಗಳಿಗೆ ನೀಡುವುದರಿಂದ ರಾಜ್ಯದ ವಿವಿಧ ಭಾಗಗಳ ನೂರಾರು ಓದಿನ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಜೊತೆಗೂಡಿ ಓದುವುದರಿಂದ ಅಭ್ಯರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ಜ್ಞಾನದ ಶಕ್ತಿ ಕೂಡ ಹೆಚ್ಚಾಗುತ್ತದೆ.
- ಈ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ನಲ್ಲಿ ಕೇವಲ ರೈಟಿಂಗ್ ಎಕ್ಸಾಮ್ ಗೆ ಮಾತ್ರ ತರಬೇತಿ ಸಿಗುವುದಿಲ್ಲ ಯಾವ ರೀತಿ ಒಂದು ಸರ್ಕಾರಿ ಅಧಿಕಾರಿಗಳ ಬಳಿ ಸಂದರ್ಶನ ಎದುರಿಸಬೇಕು ಹಾಗೆ ಸಂವಹನ ಕೌಶಲ್ಯ ಮತ್ತು ನಾಯಕತ್ವದ ಗುಣವನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎನ್ನುವುದರ ತರಬೇತಿ ಸಹ ಸಿಗುತ್ತದೆ.
ಪಾಠ್ಯಕ್ರಮ ಮತ್ತು ಮಾರ್ಗದರ್ಶನ :-
2025 26ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ 12 ತಿಂಗಳ ಯಾವ ರೀತಿ ಮಾರ್ಗದರ್ಶನ ಹಾಗೆ ಪಠ್ಯಕ್ರಮಗಳನ್ನ ನೀಡುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
- ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪುಸ್ತಕಗಳ ಮೂಲಕ ಭೂಗೋಳ, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಮೂಲಭಾಗಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ 12 ತಿಂಗಳ ಉಚಿತ ತರಬೇತಿ ಸಂಪೂರ್ಣವಾಗಿ UPSC ಮತ್ತು KAS ಸ್ಪರ್ಧಾತ್ಮಕ ಪರೀಕ್ಷೆಗೆ ಒಳಪಟ್ಟಿರುತ್ತದೆ.
- ಉತ್ತಮ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಯಾವ ರೀತಿ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ಪ್ರಬಂಧ ಬರೆಯುವ ವಿಧಾನವನ್ನು ಈ ಕೋಚಿಂಗ್ನಲ್ಲಿ ನೀಡಲಾಗುತ್ತದೆ.
- ವಾರಕ್ಕೊಮ್ಮೆ ಇತರೆ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೆ ಅವುಗಳ ಪ್ರಶ್ನೆಗೆ ಯಾವ ರೀತಿ ಉತ್ತರವಿರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ.
- ಐಚ್ಚಿಕ ವಿಷಯಗಳ ಆಳವಾದ ತರಬೇತಿ ಕೂಡ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಪ್ರತಿದಿನ ಪತ್ರಿಕೆಯ ಮುಖ್ಯ ಸುದ್ದಿಗಳನ್ನು ಎಲ್ಲಾ ವಿದ್ಯಾರ್ಥಿಗಳು ಚರ್ಚೆ ಮಾಡುವುದರ ಜೊತೆಗೆ ತರಬೇತಿ ನೀಡುವ ಮುಖ್ಯ ತರಬೇತುದಾರರು ವಿದ್ಯಾರ್ಥಿಗಳಿಯೊಂದಿಗೆ ಚರ್ಚೆ ನಡೆಸುತ್ತಾರೆ.
- ಕೇವಲ ಇತ್ತೀಚಿನ ಮಾದರಿ ಪ್ರಶ್ನೆಗಳನ್ನ ವಿದ್ಯಾರ್ಥಿಗಳಿಗೆ ತಿಳಿಸುವುದಲ್ಲದೆ ಹಳೆಯ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಕೂಡ ಇಲ್ಲಿ ನಡೆಯುತ್ತದೆ.
- ಅನುಭವ ಹೊಂದಿರುವ ಶಿಕ್ಷಕರಿಂದ ಉತ್ತಮವಾದ ಮಾರ್ಗದರ್ಶನ ಸಿಗುತ್ತದೆ. ಹಾಗೆಯೇ ಹಂತ ಹಂತವಾಗಿ ಕಲಿಸಿ ವಿದ್ಯಾರ್ಥಿಯನ್ನು ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುವ ಮೂಲಕ ಯೋಜನೆ ತನ್ನ ಯಶಸ್ಸನ್ನ ಸಾಧಿಸುತ್ತದೆ.
ತರಬೇತಿ ನಡೆಯುವ ಸ್ಥಳದ ಬಗ್ಗೆ ಸಂಪೂರ್ಣ ವಿವರದ ಜೊತೆಗೆ ವಿಶೇಷ ಮಾಹಿತಿ :-
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 2025-26ನೇ ಸಾಲಿನಲ್ಲಿ ಬರುವ ಪರೀಕ್ಷೆಗಳಿಗಾಗಿ ಬೆಂಗಳೂರಿನ ಹಾಜ್ ಭವನದಲ್ಲಿ ಉಚಿತ ವಸತಿ, ತರಬೇತಿಯನ್ನ ಆಯೋಜಿಸಿದೆ. ಇದರ ಬಗ್ಗೆ ಇನ್ನಷ್ಟು ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀವು ತಿಳಿಯಬಹುದು.
- ಬೆಂಗಳೂರಿನ ಹುಣಸೂರು ಸಂಸ್ಥೆಯಲ್ಲಿರುವ ಹಜ್ ಭವನವು ಕೇವಲ ಪ್ರವಾಸಿಗರ ಹಾಗೆ ಯಾಂತ್ರಿಕ ಕಾರಣವಲ್ಲ ಇದು ಜ್ಞಾನ ದೇಗುಲವೂ ಹೌದು.
- ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ಶಾಂತಿಯುತ ಪರಿಸರವನ್ನ ಮತ್ತು ವಸತಿ ವ್ಯವಸ್ಥೆಯನ್ನ ಈ ಸುಸರ್ಜಿತ ಕಟ್ಟಡ ನಿರ್ಮಾಣಗೊಂಡಿವೆ.
- ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೇವಲ ತರಬೇತಿಯನ್ನು ನೀಡದೆ ಉತ್ತಮ ಹಾಗೆ ಗುಣಮಟ್ಟದ ಉಪಹಾರ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಸಹ ಉತ್ತಮವಾಗಿ ಕಲ್ಪಿಸಿದೆ.
- ಇಷ್ಟೇ ಅಲ್ಲದ ವಿದ್ಯಾರ್ಥಿಗಳಿಗಾಗಿ ಸಾವಿರಾರು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಲೈಬ್ರರಿ ಮತ್ತು ರೀಡಿಂಗ್ ಇದೆ ಅಷ್ಟೇ ಅಲ್ಲದೆ ಮಾಸಪತ್ರಿಕೆಗಳು ಮತ್ತು ಇ-ಲೈಬ್ರರಿ ಸೌಲಭ್ಯ ಕೂಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರ್ಕಾರ ಒದಗಿಸಿದೆ.
- ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಆನ್ಲೈನ್ ತರಬೇತಿಗಳು ಮತ್ತು ಸಂಶೋಧನಾಕ್ಕಾಗಿ ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆ ಕೂಡ ಸರ್ಕಾರ ಒದಗಿಸಿದೆ
ಸಮಯ, ಸ್ಥಳ, ದಿನಾಂಕ, ತಿಳಿಯಲೇಬೇಕಾದ ಮುಖ್ಯ ಮಾಹಿತಿ :-
- ಅಭ್ಯರ್ಥಿಗಳು ವರದಿ ಮಾಡುವ ಸ್ಥಳ: ಹಜ್ ಭವನ, ಬೆಂಗಳೂರು – 560064
- ಕೊನೆಯ ದಿನಾಂಕ: 16-02-2026 ರಿಂದ 18-02-2026 ಸಂಜೆ 5:00 ಗಂಟೆಯೊಳಗೆ
ಮುಖ್ಯ ಅಂಶ :–
- ಗಡುವಿನ ನಂತರ ಬರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ
- ಆದ್ದರಿಂದ ಮುಂಚಿತವಾಗಿ ಹಾಜರಾಗುವುದು ಬಹಳಷ್ಟು ಮುಖ್ಯವಾಗುತ್ತದೆ.
ವಿದ್ಯಾರ್ಥಿಗಳಲ್ಲಿ ತರಬೇತಿ ಪಡೆಯಲು ಕಡ್ಡಾಯವಾಗಿ ಇರಬೇಕಾದ ದಾಖಲಾತಿಗಳು :-
ಯಾವುದೇ ಸರ್ಕಾರದ ಯೋಜನೆಗಳಾಗಿರಲಿ, ಉದ್ಯೋಗ ವಾಗಿರಲಿ ಅಥವಾ ಕೋಚಿಂಗ್ ಆಗಿರಲಿ ದಾಖಲೆಗಳಿಂದದೆ ನಿಮ್ಮನ್ನು ಅರ್ಹರೆಂದು ಪರಿಗಣಿಸುವುದಿಲ್ಲ ಹಾಗಾಗಿ ನಿಮ್ಮಲ್ಲಿಯೂ ಸಹ ಈ ಕೆಳಗಿನ ದಾಖಲಾತಿಗಳು ಕಡಾಯವಾಗಿ ಇರಲೇಬೇಕು.
| ದಾಖಲೆ / Document | ವಿವರ / Details |
|---|---|
| ಶೈಕ್ಷಣಿಕ ದಾಖಲೆಗಳು / Academic Records | 10ನೇ ತರಗತಿ, ಪಿಯುಸಿ ಮತ್ತು ಪದವಿಯ ಎಲ್ಲಾ ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೇಟ್ |
| ಗುರುತಿನ ಚೀಟಿ / Identity Proof | ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ |
| ಜಾತಿ ಮತ್ತು ಆದಾಯ ಪ್ರಮಾಣಪತ್ರ / Caste & Income Certificate | ಇತ್ತೀಚಿನ ಪ್ರಮಾಣಪತ್ರ (Valid Certificate) |
| ನಿವಾಸ ದೃಢೀಕರಣ / Address Proof | ರೇಷನ್ ಕಾರ್ಡ್ ಅಥವಾ ವಾಸಸ್ಥಳ ದೃಢೀಕರಣ ಪತ್ರ |
| ಆಯ್ಕೆ ಪತ್ರ / Selection Letter | ಅಲ್ಪಸಂಖ್ಯಾತರ ಇಲಾಖೆಯಿಂದ ಬಂದ ಇಮೇಲ್ ಅಥವಾ ಮೆಸೇಜ್ ಪ್ರತಿ |
| ಬ್ಯಾಂಕ್ ವಿವರ / Bank Details | ಪಾಸ್ಬುಕ್ ಮೊದಲ ಪುಟದ ಜೆರಾಕ್ಸ್ |
| ಫೋಟೋಗಳು / Photographs | 10 ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು |
ಹುದ್ದೆಗಳ ಪರೀಕ್ಷೆಯ ಬಗ್ಗೆ ಸ್ವಲ್ಪ ಮಾಹಿತಿ :-
ತರಬೇತಿಯ ನಂತರದ ಪರೀಕ್ಷೆಗಳು ಭಾರತ ದೇಶದಲ್ಲಿ ಉತ್ತಮ ಅಧಿಕಾರಿಯಾಗಲು ನಡೆಯುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾಗಿವೆ. UPSC (Union Public Service Commission) ಪರೀಕ್ಷೆ ಕೇಂದ್ರ ಸರ್ಕಾರದ Indian Administrative Service (IAS), Indian Police Service (IPS) ಸೇರಿದಂತೆ 24 ವಿಭಿನ್ನ ಸೇವೆಗಳಿಗೆ ನಡೆಯುವ ಅತ್ಯಂತ ಕಠಿಣ ಪರೀಕ್ಷೆಯಾಗಿದ್ದು, ದೃಢಸಂಕಲ್ಪ ಮತ್ತು ಸಂಪೂರ್ಣ ಪರೀಕ್ಷಾ ಸಿದ್ಧತೆ ಇದ್ದಲ್ಲಿ ಮಾತ್ರ ಈ ಅಧಿಕಾರಿಯಾಗಲು ನಿಮ್ಮಿಂದ ಸಾಧ್ಯ.
ನಿಮ್ಮ ಯಶಸ್ಸಿಗೆ ಈ ಸೂತ್ರಗಳನ್ನ ಅನುಸರಿಸಿ:-
- ಅಭ್ಯರ್ಥಿಗಳು ಪ್ರತಿದಿನ ತಪ್ಪದೆ ಪತ್ರಿಕೆಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅಂದರೆ “ದಿ ಹಿಂದು ಅಥವಾ ಇಂಡಿಯನ್ ಎಕ್ಸ್ಪ್ರೆಸ್” ಹೀಗೆ ಇನ್ನೂ ಅನೇಕ ವಿಷಯಗಳನ್ನು ಒಳಗೊಂಡ ಪತ್ರಿಕೆಗಳನ್ನ ಓದುವುದು ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಅನುಕೂಲವಾಗಿರುತ್ತದೆ.
- ನಿಮ್ಮೊಟ್ಟಿಗೆ ಇರುವಂತಹ ಸಹಪಾಠಿಗಳೊಂದಿಗೆ ಬಹಳಷ್ಟು ವಿಷಯವನ್ನು ಚರ್ಚೆ ಮಾಡುವುದು ನಿಮ್ಮ ಜ್ಞಾನ ಕೌಶಲ್ಯವನ್ನು ಹೆಚ್ಚಿಸುತ್ತದೆ.
- ಈ ಸಮಯದಲ್ಲಿ ಕನಿಷ್ಠ 6 ಗಂಟೆಗಳ ಕಾಲ ನೀವು ನಿದ್ರೆ ಮಾಡುವುದು ಮತ್ತು ಸಮತೋಲನ ಆಹಾರ ಸೇವಿಸುವುದು, ಬಹಳಷ್ಟು ಉತ್ತಮವಾಗಿ ಇರುತ್ತದೆ.
- ನೀವು ಯಾವುದೇ ಒಂದು ವಿಷಯವನ್ನು ತಿಳಿದರೂ ಕಲಿತರು ಅಥವಾ ಬೇರೆಯವರಿಂದ ತಿಳಿದರೂ ಸಹ ಸ್ವಂತ ನೋಟ್ ಬುಕ್ ಅನ್ನ ಮಾಡಿಕೊಳ್ಳುವುದು ನಿಮ್ಮ ಯಶಸ್ವಿಗೆ ನೀವೇ ದಾರಿ ಮಾಡಿಕೊಂಡಂತಾಗುತ್ತದೆ.
ಮುಖ್ಯ ಸೌಲಭ್ಯಗಳು ಮತ್ತು ಅನುಕೂಲತೆ ತಿಳಿಯಲು ಬಯಸುವಿರಾ?
ನಿಮ್ಮ ಉಜ್ವಲವಾದ ಭವಿಷ್ಯವನ್ನು ರೂಪಿಸಲು ಕೇವಲ ತರಬೇತಿಯನ್ನ ನೀಡುವುದರ ಜೊತೆಗೆ ಕೆಲವೊಂದು ಸೌಲಭ್ಯಗಳನ್ನು ಕೂಡ ಒದಗಿಸಿದೆ. ಹಾಗಿದ್ರೆ ಏನು ಈ ಸೌಲಭ್ಯ ? ಯಾವ ರೀತಿಯ ಸೌಲಭ್ಯ ? ಈ ಕೆಳಗೆ ನೋಡಿ.
- ಯುಪಿಎಸ್ಸಿ ಮತ್ತು ಕೆಎಎಸ್ ಪರೀಕ್ಷೆಗೆ ನಿಮ್ಮನ್ನ ತಯಾರು ಮಾಡಲು ತಜ್ಞರಿಂದ ಉಚಿತ ತರಬೇತಿ ಸಿಗುವುದು ಗ್ಯಾರಂಟಿ.
- ಹಾಜ್ ಭವನದಲ್ಲಿ ಸೂಪರ್ಜಿತ ಹಾಸ್ಟೆಲ್ ವ್ಯವಸ್ಥೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಇರುತ್ತದೆ.
- ವಿದ್ಯಾರ್ಥಿಗಳಿಗೆ ಮೂರು ಹೊತ್ತು ಉಚಿತವಾಗಿ ಪೌಷ್ಟಿಕ ಆಹಾರ ಲಭ್ಯ.
- ಲೈಬ್ರರಿ ವ್ಯವಸ್ಥೆ ಮತ್ತು ಓದುವ ಕೊಠಡಿ ಕೂಡ ಪ್ರತ್ಯೇಕವಾಗಿ ಇರುತ್ತದೆ ಹಾಗೆಯೇ ಅಧ್ಯಯನಕ್ಕಾಗಿ ಹೈ ಸ್ಪೀಡ್ ವೈಫೈ ವ್ಯವಸ್ಥೆಯು ಕೂಡ ಲಭ್ಯವಿದೆ
- ಮುಖ್ಯವಾಗಿ ನೀವು ಇದೇ ರೀತಿಯ ಕೋಚಿಂಗ್ ಅನ್ನ ಪಡೆಯಲು ಮುಂದಾದರೆ ಬೇರೆ ಖಾಸಗಿ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ (fees) ಖರ್ಚು ಮಾಡಬೇಕಾಗುತ್ತದೆ. ಈ ಸಂಪೂರ್ಣ ಮೊತ್ತವು ಸರ್ಕಾರದ ಕೋಚಿಂಗ್ ನಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಉಳಿತಾಯವಾಗುತ್ತದೆ.
ನೀವು ತರಬೇತಿಯಲ್ಲಿ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳು ಮತ್ತು ಶಿಸ್ತುಗಳು(Rules And Regulation) :-
ಸರ್ಕಾರವು ಪ್ರತಿ ವಿದ್ಯಾರ್ಥಿಯ ಮೇಲೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುವುದರಿಂದ ಇಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಮನಾಗಿ ನೋಡುತ್ತದೆ ಹಾಗೆಯೇ ವಿದ್ಯಾರ್ಥಿಗಳು ತಮ್ಮ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದರ ಜೊತೆಗೆ ಕೆಲವೊಂದು ಶಿಸ್ತುಗಳನ್ನ ಹಾಗೆ ನಿಯಮಗಳನ್ನ ಪಾಲಿಸಲೇಬೇಕು.
- ವಿದ್ಯಾರ್ಥಿಗಳು ಶೇಕಡ 90% ಕ್ಕಿಂತ ಹೆಚ್ಚು ಕಡ್ಡಾಯವಾಗಿತಮ್ಮ ಹಾಜರಿಯನ್ನ ಹೊಂದಿರಬೇಕಾಗುತ್ತದೆ
- ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಯಾವುದೇ ರೀತಿಯ ಕೆಟ್ಟ ನಡವಳಿಕೆಯನ್ನು ತೋರಿಸಿದರೆ ಅಥವಾ ಪರೀಕ್ಷೆಯಲ್ಲಿ ನಿರಂತರವಾಗಿ ಕಳೆಪೆ ಪ್ರದರ್ಶನ ನೀಡಿದರೆ ತರಬೇತಿಯಿಂದ ಹೊರ ಹಾಕುವ ಅಧಿಕಾರ ಸಂಪೂರ್ಣವಾಗಿ ಇಲಾಖೆಗೆ ಇರುತ್ತದೆ.
- ಈ 12 ತಿಂಗಳ ತರಬೇತಿ ಸಮಯದಲ್ಲಿ ಯಾವುದೇ ವಿದ್ಯಾರ್ಥಿ ಸಂಪೂರ್ಣವಾಗಿ ತರಬೇತಿಗೆ ಮಾತ್ರ ಗಮನಹರಿಸಬೇಕು, ಬೇರೆ ಕೆಲಸ (ಉದ್ಯೋಗ) ಅಥವಾ ಕಾಲೇಜ್/ಯುನಿವರ್ಸಿಟಿಯ ಪೂರ್ಣಾವಧಿ ಕೋರ್ಸ್ ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಂಪರ್ಕ(More information):-
ಯಾವುದೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಸರ್ಕಾರದ ಈ ಯೋಜನೆಯ ಬಗ್ಗೆ ಗೊಂದಲವಿದ್ದರೆ ಅಥವಾ ಹೆಚ್ಚುವರಿ ಮಾಹಿತಿ ಬೇಕಾದರೆ ಕೆಳಗೆ ಕೊಡಲಾದ ಇಲಾಖೆ ವೆಬ್ಸೈಟ್, ಸಹಾಯವಾಣಿ ಸಂಖ್ಯೆ ಅಥವಾ ಇ-ಮೇಲ್ ಅಡ್ರೆಸ್ ನಲ್ಲಿ ತಿಳಿಯಬಹುದಾಗಿದೆ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವೆಬ್ಸೈಟ್ : https://dom.karnataka.gov.in
- ಸಹಾಯವಾಣಿ ಸಂಖ್ಯೆ: 82777 99990
- ಇಮೇಲ್ ಐಡಿ : oafupsckpscqueries@gmail.com
ನನ್ನ ಕೊನೆಯ ಮಾತು :-
ನಮ್ಮ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡಬೇಕು ಎನ್ನುವ ತೀರ್ಮಾನ ನನ್ನ ಪ್ರಕಾರ ಸರಿಯಾಗಿಯೇ ಇದೆ. ಕೇವಲ ಇದು ಒಂದು ಉಚಿತ ಕೋಚಿಂಗ್ ಅಲ್ಲ ಸಾವಿರಾರು ಕುಟುಂಬಗಳ ಭವಿಷ್ಯವನ್ನು ಬದಲಿಸುವ ಸುವರ್ಣ ಸೇತುವೆ ಎಂದರೆ ತಪ್ಪಾಗುವುದಿಲ್ಲ. ಸ್ನೇಹಿತರೆ ಹಾಜ್ ಭವನದ ಆವರಣದಲ್ಲಿ ನೀವು ಕಳೆಯುವ ಪ್ರತಿ ನಿಮಿಷವು ನಿಮ್ಮನ್ನ ಐಪಿಎಸ್ ಅಥವಾ ಕೆಎಎಸ್ ಅಧಿಕಾರಿಯನ್ನಾಗಿ ಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಅಷ್ಟೇ ಅಲ್ಲದೆ ಕಠಿಣ ಪರಿಶ್ರಮ ನಿಮ್ಮ ತಾಳ್ಮೆ ಮತ್ತು ಸರ್ಕಾರದ ಈ ಅದ್ಭುತ ಬೆಂಬಲವಿದ್ದರೆ ನೀವು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಯಶಸ್ವಿಯುತ ಸಾಧನೆಯನ್ನ ಮಾಡಲಿದ್ದೀರಿ.
ಪದೇ ಪದೇ ಕೇಳಲಾದ ಪ್ರಶ್ನೆಗಳು (Frequently Asked Questions) :-
ಉತ್ತರ: ಇದು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಪದವೀಧರ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿದೆ.
ಉತ್ತರ: ಒಟ್ಟು 12 ತಿಂಗಳುಗಳ (ಒಂದು ವರ್ಷ) ಪೂರ್ಣಾವಧಿ ತರಬೇತಿ ಇದಾಗಿರುತ್ತದೆ.
ಉತ್ತರ: ಹೌದು, ಕೇಂದ್ರ ನಾಗರಿಕ ಸೇವೆ (UPSC) ಮತ್ತು ರಾಜ್ಯ ನಾಗರಿಕ ಸೇವೆ (KAS) ಎರಡೂ ಪರೀಕ್ಷೆಗಳಿಗೆ ಸಮಗ್ರ ತರಬೇತಿ ನೀಡಲಾಗುತ್ತದೆ.
ಉತ್ತರ: ಇಲ್ಲ, ತರಬೇತಿ, ವಸತಿ ಮತ್ತು ಊಟದ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.










