ನಮಸ್ಕಾರ ರೈತಬಾಂಧವರೇ, ನಿಮ್ಮ ಕೃಷಿ ಭೂಮಿಗೆ ಸರಿಯಾದ ನೀರಾವರಿ ಸೌಲಭ್ಯ ಇಲ್ಲವೆಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ? ನೀವು ಸಲ್ಲಿಸಿದ ಅರ್ಜಿಯ ಸ್ಥಿತಿ ಗತಿಯನ್ನು ತಿಳಿಯಲು ಕಚೇರಿಗೆ ಭೇಟಿ ನೀಡಬೇಕಲ್ಲಾ ಅಂತ ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಕರ್ನಾಟಕ ಸರ್ಕಾರವು ಸುಲಭ ವಿಧಾನ ಹಾಗೂ ಪಾರದರ್ಶಕತೆಯಿಂದ ಗಂಗಾ ಕಲ್ಯಾಣ ಯೋಜನೆಯ ಸ್ಥಿತಿ ಪರಿಶೀಲನೆಗೆ ಮುಕ್ತ ಅವಕಾಶ ಕಲ್ಪಿಸಿದೆ. ಅಂದರೆ ಸುಲಭವಾಗಿ ಆನ್ಲೈನ್ ಮೂಲಕ ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ.
Ganga Kalyana Scheme in kannada
ಯಾವುದೇ ರೈತರಿಗೂ ತಾವು ಕೃಷಿ ಚಟುವಟಿಕೆಯನ್ನು ತೊಡಗಿಸಿಕೊಳ್ಳಬೇಕಾದರೂ ಕೃಷಿ ಚಟುವಟಿಕೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳು ಇರಬೇಕು. ಮುಖ್ಯವಾಗಿ ನೀರಾವರಿ ಸೌಲಭ್ಯವೇ ಕೃಷಿಗೆ ಆಧಾರವಾಗಿದೆ. ಆದರೆ ಎಷ್ಟೋ ರೈತರು ತಮ್ಮ ಕೃಷಿ ಭೂಮಿಯಲ್ಲಿ ಸರಿಯಾದ ನೀರಾವರಿ ಸೌಲಭ್ಯಗಳಿಲ್ಲದೆ ಕೃಷಿ ಭೂಮಿಗೆ ನೀರುಣಿಸಲು ಪರದಾಡುತ್ತಾರೆ. ಅಂತಹ ರೈತರಿಗೆ ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಿ ಎಷ್ಟೋ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ.
ಹೀಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸಿದ ರೈತರಲ್ಲಿ ನೀವು ಒಬ್ಬರಾಗಿದ್ದರೆ, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಈ ಯೋಜನೆಯಡಿಯಲ್ಲಿ ನಿಮ್ಮ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಯಾವಾಗ ಸಿಗಲಿದೆ? ಎನ್ನುವ ನೂರಾರು ಪ್ರಶ್ನೆಗಳು ನಿಮ್ಮಲ್ಲಿ ಉಂಟಾಗಬಹುದು. ಇವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇನ್ನು ನೀವು ಕಚೇರಿಗೆ ಅಲಿಯುವ ಬದಲು ಮನೆಯಲ್ಲೇ ಕುಳಿತು ಸುಲಭವಾಗಿ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಪಾರದರ್ಶಕವಾಗಿ ನಿಮ್ಮ ಅರ್ಜಿಯ ಸ್ಥಿತಿ ಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿ-ಗತಿ ಯನ್ನು ಆನ್ಲೈನ್ ಮೂಲಕ ಹೇಗೆ ತಿಳಿದುಕೊಳ್ಳುವುದು? ಏನಲ್ಲಾ ದಾಖಲೆಗಳು ಅಗತ್ಯ? ಎನ್ನುವ ಕುರಿತು ಮಾಹಿತಿ ಅಗತ್ಯವಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಹೊಸ-ಹೊಸ ವಿಷಯಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಲ್ನಾಡ್ ನ್ಯೂಸ್.ಇನ್ ಗೆ ಭೇಟಿ ನೀಡಿ.
ಯೋಜನೆಯ ವಿಶ್ಲೇಷಣೆ:
| ಯೋಜನೆಯ ಹೆಸರು | ಗಂಗಾ ಕಲ್ಯಾಣ ಯೋಜನೆ (Ganga Kalyana Scheme) |
| ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳು | ರೈತರು |
| ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳು | ರೈತರ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು |
| ಯೋಜನೆಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ತಿಳಿಯುವ ವಿಧಾನ | ಆನ್ಲೈನ್ ಮೂಲಕ |
ಏನಿದು ಗಂಗಾ ಕಲ್ಯಾಣ ಯೋಜನೆ?
ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯು 1983 ರಲ್ಲಿ ಪ್ರಾರಂಭಗೊಂಡಿತು. ತಮ್ಮ ಕೃಷಿ ಭೂಮಿಯಲ್ಲಿ ನೀರಾವರಿ ಸೌಲಭ್ಯಗಳಿಲ್ಲದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆಯಡಿಯಲ್ಲಿ ಉಚಿತ ಕೊಳವೆಬಾವಿ, ಪಂಪ್ಸೆಟ್ ಹಾಗೂ ಮೋಟರ್ ಅಳವಡಣೆ ಹಾಗೂ ಬೋರ್ವೆಲ್ ಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.
ಅಭ್ಯರ್ಥಿಗಳು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ರೈತರು ಕನಿಷ್ಠ 1.5 ಎಕ್ಕರೆ ಇಂದು ಗರಿಷ್ಟ 5 ಎಕ್ಕರೆ ಕೃಷಿ ಭೂಮಿಯನ್ನು ಹೊಂದಿರಬೇಕು.
ಗಂಗಾ ಕಲ್ಯಾಣ ಯೋಜನೆಯನ್ನು ಏಕೆ ಜಾರಿಗೊಳಿಸಲಾಯಿತು?
1. ರೈತರ ಆರ್ಥಿಕ ಸಬಲೀಕರಣ:
ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ಅವರು ವರ್ಷಕ್ಕೆ ಎರಡು ಮೂರು ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸುವ ಮೂಲಕ ಅವರ ಆದಾಯ ಮಟ್ಟವನ್ನು ಹೆಚ್ಚಿಸಿ ಸಮಾಜದಲ್ಲಿ ಅವರನ್ನು ಸಬಲರನ್ನಾಗಿ ಮಾಡುವುದು.
2. ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು:
ಮಳೆಯನ್ನೇ ನಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ಮಳೆ ಬಂದಾಗ ಮಾತ್ರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿತ್ತು. ಅಂತಹ ರೈತರ ಕೃಷಿ ಭೂಮಿಗೆ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಉಚಿತವಾಗಿ ಕೊಳವೆಬಾವಿಗಳನ್ನು ಕೊರೆಸಿಕೊಡುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವುದು.
3.ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು:
ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಎಷ್ಟೋ ಒಣ ಭೂಮಿಗಳನ್ನು ನೀರಾವರಿ ಭೂಮಿಗಳನ್ನಾಗಿ ಪರಿವರ್ತಿಸುವ ಮೂಲಕ ರಾಜ್ಯದಲ್ಲಿ ಬೆಳೆಗಳ ಇಳುವರಿಯನ್ನು ಹೆಚ್ಚಿಸುವುದು ಹಾಗೂ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ.
4. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ:
ಆರ್ಥಿಕವಾಗಿ ಹಿಂದುಳಿದ ವರ್ಗಗಳಾದ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ವಿಶೇಷ ಆದ್ಯತೆಯನ್ನು ನೀಡುವ ಮೂಲಕ ಅವರುಗಳನ್ನು ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ಸಿಗುವ ಸೌಲಭ್ಯಗಳು:
1. ಉಚಿತ ಬೋರ್ವೆಲ್ ಕೊರೆಸಲಾಗುತ್ತದೆ:
ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಅರ್ಹ ಫಲಾನುಭವಿ ರೈತರ ಕೃಷಿ ಭೂಮಿಗೆ ಉಚಿತವಾಗಿ ಬೋರ್ವೆಲ್ ಅಥವಾ ತೆರೆದ ಬಾವಿಯನ್ನು ಕೊರೆಸಿಕೊಡಲಾಗುವುದು. ಎಲ್ಲ ವೆಚ್ಚಗಳನ್ನು ಸರ್ಕಾರವೇ ಭರಿಸುವುದರಿಂದ ಅರ್ಹ ರೈತರು ಯಾವುದೇ ಹಣವನ್ನು ನೀಡುವ ಅಗತ್ಯವಿಲ್ಲ.
2. ಪಂಪ್ಸೆಟ್ ಹಾಗೂ ಮೋಟರ್ ಅಳವಡನೆ:
ಬೋರ್ವೆಲ್ ಕೊರೆಸಿದ ನಂತರ ಅದಕ್ಕೆ ಅಗತ್ಯವಾದ ಸಬ್ ಮರ್ಸಿಬಲ್ ಪಂಪ್ಸೆಟ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗುತ್ತದೆ. ಇವುಗಳ ವೆಚ್ಚವನ್ನು ಕೂಡ ಸರ್ಕಾರವೇ ಭರಿಸುತ್ತದೆ.
4. ವಿದ್ಯುದ್ದೀಕರಣ:
ಬೋರ್ವೆಲ್ ಕೊರೆಸಿ ಅವುಗಳಿಗೆ ಮೋಟಾರ್ ಅಥವಾ ಪಂಪ್ಸೆಟ್ ಅಳವಡಿಸಿದ ನಂತರ ಅವುಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಇವುಗಳ ವೆಚ್ಚವನ್ನು ಸರ್ಕಾರವೇ ಬಾರಿಸುತ್ತದೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಿಗುವ ಒಟ್ಟು ಸಹಾಯಧನಗಳ ವಿವರ:
ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಸಿಗುವ ಸಹಾಯಧನವು ವಿವಿಧ ಜಿಲ್ಲೆಗಳಿಗೆ ಬೇರೆ ಬೇರೆ ಆಗಿರುತ್ತದೆ ಅವುಗಳ ವಿವರ ಹೀಗಿದೆ,
- ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಅರ್ಹ ರೈತರಿಗೆ ₹4.75 ಲಕ್ಷ ಒಟ್ಟು ಘಟಕ ವೆಚ್ಚವಾಗಿದ್ದು, ಅದರಲ್ಲಿ ₹4.25 ಲಕ್ಷ ಹಣವನ್ನು ಸಹಾಯಧನವಾಗಿ ಪಡೆದರೆ ಉಳಿದ ₹50,000 ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.
- ಹಾಗೂ ಇನ್ನಿತರೇ ಉಳಿದ ಜಿಲ್ಲೆಗಳ ಅರ್ಹ ಫಲಾನುಭವಿ ರೈತರಿಗೆ ₹3.75 ಲಕ್ಷ ಒಟ್ಟು ಘಟಕ ವೆಚ್ಚವಾಗಿದ್ದು, ಅದರಲ್ಲಿ ₹3.25 ಲಕ್ಷ ಹಣವನ್ನು ಸಹಾಯಧನವಾಗಿ ಪಡೆದರೆ ಉಳಿದ ₹50,000 ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.
- ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಿಗುವ ₹50,000 ಸಾಲಕ್ಕೆ ಕಡಿಮೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬರುವ ಕೆಲವು ಅಭಿವೃದ್ಧಿ ನಿಗಮಗಳು:
- ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
- ಕರ್ನಾಟಕ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ನಿಯಮಿತ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮ ನಿಯಮಿತ
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಕರ್ನಾಟಕ ಉಪ್ಪರ ಅಭಿವೃದ್ಧಿ ನಿಗಮ
- ಕರ್ನಾಟಕ ವೇರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ತಂಡ ಅಭಿವೃದ್ಧಿ ನಿಗಮ ನಿಯಮಿತ
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮ
- ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾದ ಫಲಾನುಭವಿಗಳು:
- ಅರ್ಜಿದಾರರು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.
- ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣಪತ್ರವನ್ನು ಹೊಂದಿರಬೇಕು.
- ಅರ್ಜಿದಾರರು ಕನಿಷ್ಠ 1.5 ಎಕ್ಕರೆಯಿಂದ 5 ಎಕ್ಕರೆ ಕೃಷಿ ಭೂಮಿಯನ್ನು ಹೊಂದಿರಬೇಕು.
- ಅರ್ಜಿದಾರರು ಕನಿಷ್ಠ 18 ರಿಂದ 55 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ನಗರ ಭಾಗಗಳಲ್ಲಿ ₹1.03 ಲಕ್ಷ ಮೀರಿರಬಾರದು ಹಾಗೂ ಗ್ರಾಮೀಣ ಭಾಗದಲ್ಲಿ ₹96,000 ಮೀರಿರಬಾರದು.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ತಿಳಿಯುದರಿಂದ ರೈತರಿಗಾಗುವ ಪ್ರಯೋಜನಗಳು:
- ರೈತರು ಸುಲಭವಾಗಿ ಮೊಬೈಲ್ ಮೂಲಕ ಮನೆಯಲ್ಲೇ ಕುಳಿತು ಅರ್ಜಿಯ ಸ್ಥಿತಿಗತಿಗಳನ್ನು ತಿಳಿಯುವುದರಿಂದ ರೈತರ ಸಮಯವೂ ಉಳಿತಾಯವಾಗುತ್ತದೆ ಇದರಿಂದಾಗಿ ತಮ್ಮ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಸಮಯವನ್ನು ನೀಡಬಹುದಾಗಿದೆ.
- ರೈತರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ತಿಳಿಯುವುದರಿಂದ ಅವುಗಳ ಕುರಿತು ಮಾಹಿತಿ ಪಡೆಯಲು ಪದೇ ಪದೇ ಕಚೇರಿಗೆ ಅಲಿಯುವ ಅಗತ್ಯ ಇರುವುದಿಲ್ಲ ಇದರಿಂದಾಗಿ ಹಣವನ್ನು ಉಳಿತಾಯ ಮಾಡಬಹುದಾಗಿದೆ.
- ಕರ್ನಾಟಕ ಸರ್ಕಾರವು ಆನ್ಲೈನ್ ಮೂಲಕ ಅರ್ಜಿಯ ಸ್ಥಿತಿಗತಿಗಳನ್ನು ತಿಳಿಯಲು ಅನುವು ಮಾಡಿ ಕೊಟ್ಟಿರುವುದರಿಂದ ರೈತರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಹಾಗೂ ಅವರಿಗೆ ಲಂಚ ಕೊಡುವ ಅಗತ್ಯವಿಲ್ಲದೆ ಸುಲಭವಾಗಿ ಮನೆಯಲ್ಲೇ ಕುಳಿತು ಅರ್ಜಿ ಯಾವ ಹಂತದಲ್ಲಿ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.
- ರೈತರು ಒಂದು ವೇಳೆ ನೀಡಿದ ದಾಖಲೆಗಳಲ್ಲಿ ಏನಾದರು ದೋಷಗಳಿದ್ದರೆ ಅವುಗಳನ್ನು ಸುಲಭವಾಗಿ ಮೊಬೈಲ್ ಮೂಲಕ ತಿಳಿದು ದಾಖಲೆಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ.
ರೈತರು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ಹೇಗೆ ಪರಿಶೀಲಿಸುವುದು?
ರೈತರು ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಕಚೇರಿಗಳಿಗೆ ಅಲಿಯುವ ಅಗತ್ಯವಿಲ್ಲ ಬದಲಾಗಿ ಸುಲಭವಾಗಿ ಆನ್ಲೈನ್ ಮೂಲಕ ಪರಿಶೀಲಿಸಬಹುದಾಗಿದ್ದು, ಅವುಗಳ ಬಗ್ಗೆ ಮಾಹಿತಿ ಈ ಕೆಳಕಂಡಂತಿದೆ.
- ಅರ್ಹ ಫಲಾನುಭವಿ ರೈತರು ಮೊದಲು https://gangakalyanayojane.in/#/public/home ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಲು ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಗಂಗಾ ಕಲ್ಯಾಣ ಯೋಜನೆಯ ಅರ್ಜಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
- ನಂತರ ಅರ್ಜಿದಾರರು ಅಲ್ಲಿ ಕೇಳಲಾದ ಕ್ಯಾಪ್ಚ ವನ್ನು ನಮೂದಿಸಿದ ನಂತರ ತಾವು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳು ಸಂಪೂರ್ಣವಾಗಿ ಲಭ್ಯವಾಗುತ್ತದೆ.
- ಇಲ್ಲಿ ಅರ್ಜಿದಾರರ ವಿವರ, ಅರ್ಜಿಯ ಪ್ರಗತಿ, ಅರ್ಜಿಯ ಸ್ಥಿತಿ, ಆರ್ ಆರ್ ಸಂಖ್ಯೆ ಹಾಗೂ ರವಾನೆಯಾದ ದಿನಾಂಕಗಳು ಲಭ್ಯವಾಗುತ್ತದೆ.
| ಇಲ್ಲಿ ಗಮನಿಸಿ: “ಅರ್ಹ ಫಲಾನುವಿಗಳು ತಾವು ಸಲ್ಲಿಸಿದ ಅರ್ಜಿಯಲ್ಲಿ ತಪ್ಪಾದ ದಾಖಲೆಗಳನ್ನು ಲಗತ್ತಿಸಿದೆ ಅವುಗಳನ್ನು ಈ ಹಂತದಲ್ಲಿ ಸರಿಪಡಿಸಬಹುದಾಗಿದೆ.” |
ಕೊನೆಯ ಮಾತು:
ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿಯಲ್ಲಿ ಅರ್ಹ ಫಲಾನುಭವಿ ರೈತರ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಮೂಲಕ ಅವರ ನೆರವಿಗೆ ನಿಲ್ಲುವ ಪ್ರಯತ್ನ ಮಾಡಿದೆ. ಇದರ ಜೊತೆಗೆ ಆನ್ಲೈನ್ ಮೂಲಕ ಸುಲಭವಾಗಿ ಹಾಗೂ ಹೆಚ್ಚು ಪಾರದರ್ಶಕವಾಗಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ತಿಳಿಯಲು ಅವಕಾಶ ಕಲ್ಪಿಸಲಾಗಿದೆ.
ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಮನೆಯಲ್ಲೇ ಕುಳಿತು ನಿಮ್ಮ ಅರ್ಜಿ ಸ್ಥಿತಿಯನ್ನು ಪದೇ ಪದೇ ಪರಿಶೀಲನೆ ಮಾಡುವ ಮೂಲಕ ಅರ್ಜಿಯ ಸ್ಥಿತಿ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 1.5 ಎಕ್ಕರೆಯಿಂದ 5 ಎಕ್ಕರೆ ಕೃಷಿ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಾಗಿರುತ್ತಾರೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಗತಿಗಳನ್ನು ಸುಲಭವಾಗಿ ಆನ್ಲೈನ್ ಮೂಲಕ ಕೆಲವೇ ಕ್ಷಣಗಳಲ್ಲಿ ತಿಳಿಸುಕೊಳ್ಳಬಹುದಾಗಿದೆ.
ಗಂಗಾ ಕಲ್ಯಾಣ ಯೋಜನೆಯು 1983 ರಲ್ಲಿ ಪ್ರಾರಂಭವಾಯಿತು.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳಿಗೆ ಅನುಗುಣವಾಗಿ ₹3.25 ಲಕ್ಷ ದಿಂದ ₹4.25 ಲಕ್ಷ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.







