ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿಸುದ್ದಿ! ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಕನಸ್ಸನ್ನು ಕಾಣುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಫ್ಲಿಪ್ಕಾರ್ಟ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದ್ದು, ಅರ್ಹ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿವೇತನದಡಿಯಲ್ಲಿ ಹಣಕಾಸಿನ ಸಹಾಯವನ್ನು ಪಡೆದುಕೊಳ್ಳಬಹುದು.
Flipkart Foundation Scholarship
ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ ಪ್ರೋಗ್ರಾಮ್ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ₹50,000 ದ ವರೆಗೆ ಹಣಕಾಸಿನ ನೆರವನ್ನು ನೀಡುತ್ತಿದ್ದು, ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ಹೀಗೆ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗುವ ಇನ್ನಷ್ಟು ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.
ವಿದ್ಯಾರ್ಥಿವೇತನದ ವಿಮರ್ಶೆ:
| ಸಂಸ್ಥೆ | ಫ್ಲಿಪ್ಕಾರ್ಟ್ ಫೌಂಡೇಶನ್ |
| ಒಟ್ಟು ಪ್ರೋತ್ಸಾಹಧನ | ₹50,000 |
| ಫಲಾನುಭವಿಗಳು | ಡಿಪ್ಲೋಮಾ, ITI, ಪದವಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು. |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಸಂಕ್ಷಿಪ್ತ ಮಾಹಿತಿ:
ಫ್ಲಿಪ್ಕಾರ್ಟ್ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದ ವಿಶೇಷವಾಗಿ, ಕಿರಾಣಿ ಅಂಗಡಿಗಳ ಮಾಲೀಕತ್ವವನ್ನು ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸುವುದು ಈ ಸಂಸ್ಥೆಯ ಮುಖ್ಯ ಗುರಿಯಾಗಿದೆ.
ವಿದ್ಯಾರ್ಥಿವೇತನ ನೀಡುವ ಉದ್ದೇಶ:
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ:
ಅನೇಕ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ತಮ್ಮ ಕುಟುಂಬದ ಜೊತೆಗೆ ದುಡಿಮೆ ಮಾಡಲು ಹೋಗುವುದನ್ನು ತಡೆದು ಶಿಕ್ಷಣವನ್ನು ಮುಂದುವರೆಸಲು ಫ್ಲಿಪ್ಕಾರ್ಟ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡಿ, ಅವರನ್ನು ಉನ್ನತ ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸುವುದು.
ಸಣ್ಣ ವ್ಯಾಪಾರ ಮಾಡುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಬೆಂಬಲ:
ವಿಶೇಷವಾಗಿ, ಕಿರಾಣಿ ಅಂಗಡಿಯಂತಹ ಸಣ್ಣ- ಸಣ್ಣ ಅಂಗಡಿಗಳ ಮಾಲೀಕರ ಮಕ್ಕಳಿಗೆ ಹಣಕಾಸಿನ ನೆರವನ್ನು ನೀಡುವ ಮೂಲಕ ಉನ್ನತ ಶಿಕ್ಷಣವನ್ನು ಪಡೆದು ಅವರು ಒಳ್ಳೆಯ ಹುದ್ದೆಗಳನ್ನು ಪಡಿಯುವಂತೆ ಮಾಡಿ ಅವರನ್ನು ಸಮಾಜದಲ್ಲಿ ಸಬಲರನ್ನಾಗಿ ಮಾಡುವುದು.
ಸುಲಭ ವಿಧಾನ:
ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಹಾಕಲು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವುದು. ಇದರಿಂದಾಗಿ ಸಮಯ ಉಳಿತಾಯ ಆಗುವುದರ ಜೊತೆಗೆ ಅರ್ಜಿ ಹಾಕುವ ಸಮಯದಲ್ಲಿ ತರಗತಿಗೆ ಗೈರಾಗುವ ಅಗತ್ಯ ಇರುವುದಿಲ್ಲ.
ವಿದ್ಯಾರ್ಥಿವೇತನದ ಪ್ರಯೋಜನ:
- ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನದಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ₹50,000 ಸಹಾಯಧನವನ್ನು ನೀಡಲಾಗುತ್ತದೆ.
- ನೀಡಿರುವ ಸಹಾಯಧನದಿಂದಾಗಿ ಕಾಲೇಜು ಶುಲ್ಕ, ಪುಸ್ತಕಗಳು, ಪರೀಕ್ಷಾ ಶುಲ್ಕ ಹೀಗೆ ಇತರೆ ಶೈಕ್ಷಣಿಕ ವೆಚ್ಚಗಳನ್ನು ಬರಿಸಲು ಸಹಾಯಮಾಡುತ್ತದೆ.
ಅರ್ಹತಾ ಮಾನದಂಡ:
ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಅರ್ಹತೆಗಳನ್ನು ಈ ಕೆಳಗೆ ನೀಡಲಾಗಿದ್ದು, ವಿದ್ಯಾರ್ಥಿಗಳು ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
- ವಿದ್ಯಾರ್ಥಿಗಳು ಭಾರತದ ನಾಗರೀಕನಾಗಿರಬೇಕು.
- ವಿದ್ಯಾರ್ಥಿಯು 10 ನೇ ತರಗತಿಯಲ್ಲಿ ಹಾಗೂ ದ್ವಿತೀಯ PUC ಯಲ್ಲಿ ಕನಿಷ್ಠ 60% ಅಂಕವನ್ನು ಅಥವಾ ಅದಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರಬೇಕು.
- ವಿದ್ಯಾರ್ಥಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 75% ಹಾಜರಾತಿ ಹೊಂದಿರುವುದು ಕಡ್ಡಾಯ.
- ಕುಟುಂಬದ ವಾರ್ಷಿಕ ಆದಾಯವು ₹5 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆಯುತ್ತಿರಬೇಕು.
- ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಅಥವಾ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಅಗತ್ಯ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಸಹಿ
- ಹಿಂದಿನ ವರ್ಷದ ಅಂಕ ಪಟ್ಟಿ
- ಪಾನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಕಾಲೇಜು ಪ್ರವೇಶ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಈ ಕೆಳಗಿನ ಹಂತಗಳ ಆಧಾರದ ಮೇಲೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಫ್ಲಿಪ್ಕಾರ್ಟ್ ಫೌಂಡೇಶನ್ ಅಧಿಕೃತ ವೆಬ್ಸೈಟ್ https://www.buddy4study.com/scholarships ಗೆ ಭೇಟಿ ನೀಡಿ
- ಖಾತೆ ರಚಿಸಿ ಮೇಲೆ ಕ್ಲಿಕ್ ಮಾಡಿ.
- ಹೊಸ ಬಳಕೆದಾರರಾಗಿದ್ದರೆ, ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
- ಅಲ್ಲಿ ಕೇಳಲಾದ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಅಪ್ಲೈ ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
- ಅರ್ಜಿ ಸಲ್ಲಿಸಿದ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:-
ಫ್ಲಿಪ್ಕಾರ್ಟ್ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ₹50,000 ಪ್ರೋತ್ಸಾಹಧನವನ್ನು ನೀಡುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಉನ್ನತ ಶಿಕ್ಷಣಕ್ಕೆ ನೆರವನ್ನು ಪಡೆದುಕೊಳ್ಳಿ.








