Driving Licence Online Apply
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಹ ಟೆಕ್ನಾಲಜಿ ಎನ್ನುವಂತದ್ದು ತುಂಬಾನೇ ವೇಗವಾಗಿ ಬೆಳೆಯುತ್ತಿದೆ ವಿದ್ಯುತ್ ಸೇರಿದಂತೆ ಆದಾಯ ತೆರಿಗೆ ಹಾಗೂ ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇನ್ನಿತರ ಕಂಪನಿಗಳಲ್ಲಿ ಟೆಕ್ನಾಲಜಿ ಅನ್ನುವಂಥದ್ದು ತುಂಬಾನೇ ಮುಂದುವರೆದಿದ್ದು ಇದೀಗಆರ್ ಟಿ ಓ ಕಚೇರಿಯನ್ನು ಸಹ ತಲುಪಿದೆ. ಹೌದು ಹಿಂದಿನ ಕಾಲದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಬೇಕು ಅಂತ ಅಂದ್ರೆ ಸರ್ಕಾರಿ ಆರ್‌ಟಿಓ ಆಫೀಸ್ ಗೆ ಹೋಗಬೇಕಾಗಿತ್ತು ಆದರೆ ಪ್ರಸ್ತುತ ಈ ಸಮಸ್ಯೆನೆ ಇಲ್ಲ ಯಾಕಂದರೆ ಈಗ ಆನ್ಲೈನ್ ಅಲ್ಲೇ ಡ್ರೈವಿಂಗ್ ಲೇಸನ್ಸ್ ಪಡೆದುಕೊಳ್ಳಬಹುದು.
ಯೋಜನೆಯ ಉದ್ದೇಶ:-
ಈ ಯೋಜನೆಯ ಉದ್ದೇಶ ತುಂಬಾನೇ ಸರಳವಾಗಿದ್ದು ಪ್ರತಿಯೊಬ್ಬರಿಗೂ ಮನೆಯ ಬಾಗಿಲಿಗೆ ಲರ್ನಿಂಗ್ ಲೈಸನ್ಸ್ , ಡ್ರೈವಿಂಗ್ ಲೈಸೆನ್ಸ್ ಕಳುಹಿಸುವುದು ಹಾಗೂ ಅವರ ಸಮಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಅಷ್ಟೇ ಅಲ್ಲದೆ ಆಫೀಸಿಗೆ ಬಂದು ಅರ್ಜಿ ಸಲ್ಲಿಸುವುದರಿಂದ ಭ್ರಷ್ಟಾಚಾರ ಹೆಚ್ಚಾಗಬಹುದು ಇದನ್ನ ನಿಯಂತ್ರಣ ಮಾಡುವುದಕ್ಕೆ ಈ ಒಂದು ವ್ಯವಸ್ಥೆ ತುಂಬಾನೇ ಸಹಕಾರಿಯಾಗಲಿದೆ.
ಆನ್ಲೈನ್ ಅರ್ಜಿ ಸಲ್ಲಿಕೆಯಿಂದ ಏನು ಲಾಭ?
- ಪಾರದರ್ಶಕತೆ ಅರ್ಜಿ ಸಲ್ಲಿಸುವಾಗ ಯಾವಾಗ ಬೇಕಾದರೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬಹುದು
- ಮನೆಯಲ್ಲಿ ಇದ್ದುಕೊಂಡು ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಲ್ಯಾಪ್ಟಾಪ್ ನ ಮೂಲಕ ಅರ್ಜಿ ಹಾಕಬಹುದು
- ಸಮಯ ಉಳಿತಾಯ
- ಹಣಕಾಸು ಸಹ ಉಳಿತಾಯವಾಗುತ್ತದೆ
- ಅತಿ ವೇಗದಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ
- ಈ ಡ್ರೈವಿಂಗ್ ಲೈಸೆನ್ಸ್ ಮನೆ ಬಾಗಿಲಿಗೆ ತಲುಪುವುದರಿಂದ ಯಾವುದೇ ರೀತಿಯಾದ ಸಮಸ್ಯೆ ಆಗುವುದಿಲ್ಲ
ಆನ್ಲೈನ್ ಮುಖಾಂತರ ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಹತೆ ಏನು ?
ವಾಹನ ಚಲಾವಣೆ ಮಾಡುವಂತಹ ಅರ್ಹತೆ ನಿಮ್ಮಲ್ಲಿ ಇರಬೇಕು
ಯಾವುದೇ ಅಂಗವಿಕಲರಾಗಿರಬಾರದು
ಸರ್ಕಾರ ನಡೆಸುವಂತಹ ಡ್ರೈವಿಂಗ್ ಟೆಸ್ಟಿನಲ್ಲಿ ಅರ್ಹತೆಯನ್ನು ಪಡೆಯಬೇಕು ಹಾಗೂ ಇನ್ನಿತರ ಅಗತ್ಯ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ
ಆನ್ಲೈನ್ ಮುಖಂತರ ಅರ್ಜಿ ಸಲ್ಲಿಸುವುದರಿಂದ ಆಗುವ ಪ್ರಯೋಜನಗಳು:
- ಮಧ್ಯವರ್ತಿಗಳ ಅಥವಾ ಏಜೆಂಟ್ ಅಗತ್ಯವಿಲ್ಲದೆ ನೇರವಾಗಿ ಅರ್ಜಿ ಹಾಕಬಹುದು
- ವೇಗವಾದ ಅನುಮೋದನೆ ಆಧಾರ್ ಕಾರ್ಡ್ ದೃಢೀಕರಣದಿಂದ ತ್ವರಿತ ಪ್ರಕ್ರಿಯೆ ಆಗುತ್ತದೆ
- ದಿನದ 24 ಗಂಟೆಯೂ ಕೂಡ ಯಾವುದೇ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದು
- ಆನ್ಲೈನ್ ವ್ಯವಸ್ಥೆ ಆಗಿರುವುದರಿಂದ ಯಾವುದೇ ರೀತಿಯಾದ ಕಾಗದ ಬಳಕೆ ಇರುವುದಿಲ್ಲ ಇದು ಪರಿಸರ ಸ್ನೇಹ ಆಗಿರುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಜನ್ಮ ದಿನಾಂಕ ಪ್ರಮಾಣ ಪತ್ರ
- ಐಡಿ ಕಾರ್ಡ್
- ಮೆಡಿಕಲ್ ಸರ್ಟಿಫಿಕೇಟ್
ಸುಲಭವಾಗಿ ಅರ್ಜಿ ಸಲ್ಲಿಸಲು ಕೆಲವೊಂದಿಷ್ಟು ಸಲಹೆಗಳು:
- ಮೊಬೈಲ್ ಲಿಂಕ್ ಆಗಿರುವಂತ ಆಧಾರ್ ಕಾರ್ಡ್ ನಮೂದಿಸಬೇಕು
- ಅರ್ಜಿ ಹಾಕುವಾಗ ನೆಟ್ ಕನೆಕ್ಷನ್ ಸ್ಥಿರವಾಗಿರಬೇಕು
- ಯಾವುದೇ ತಪ್ಪಿಲ್ಲದೆ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು ಹಾಕಬೇಕು
- ರೆಫರೆನ್ಸ್ ನಂಬರ್ ಎಲ್ಲೂ ಕಳೆದುಕೊಳ್ಳದೆ ಇಟ್ಟುಕೊಳ್ಳಬೇಕು
- ಲರ್ನರ್ ಟೆಸ್ಟ್ ಪ್ರಶ್ನೆಗಳ ಅಭ್ಯಾಸ ಮಾಡಿ ಅಂದರೆ ಸಂಕೇತ ಪಲಕಗಳು ಟ್ರಾಫಿಕ್ ನಿಯಮಗಳನ್ನು ತಿಳಿದುಕೊಳ್ಳಬೇಕು
ಅರ್ಜಿ ಸಲ್ಲಿಸುವ ವಿವಿಧ ಹಂತಗಳ ಮಾಹಿತಿ:
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್ ನಲ್ಲಿ ಪರಿವಾಹನ್ ಸೇವಾ ಎಂದು ಟೈಪ್ ಮಾಡಿ ಪರಿವಾಹನ್ ಸೇವಾ ಟ್ರಾನ್ಸ್ಪೋರ್ಟ್ ವೆಬ್ಸೈಟ್ ಗೆ ಭೇಟಿ ನೀಡಿ
ಲೈಸೆನ್ಸ್ ಗೆ ಸಂಬಂಧಪಟ್ಟಂತಹ ಸೇವೆಯನ್ನು ಆಯ್ಕೆ ಮಾಡಿ ಹೋಂ ಪೇಜ್ ನಲ್ಲಿ ಲೈಸೆನ್ಸ್ ರಿಲೇಟೆಡ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ
ನಂತರ ಡ್ರೈವರ್ ಲೈಸೆನ್ಸ್ ಆಯ್ಕೆ ಮಾಡಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ (ಉದಾಹರಣೆಗೆ ಕರ್ನಾಟಕ ಆಗಿದ್ದರೆ ಕರ್ನಾಟಕ ಎಂದು ಆಯ್ಕೆ ಮಾಡಿ) ನಂತರ ಅಪ್ಲೈ ಫಾರ್ ಲರ್ನರ್ ಲೈಸೆನ್ಸ್ ಮೇಲೆ ಕ್ಲಿಕ್ ಮಾಡಿ ಸಂಬಂಧಿಸಿದ ರಾಜ್ಯ ಸಾರಿಗೆ ಇಲಾಖೆಯ ಪುಟ ತರೆದುಕೊಳ್ಳುತ್ತದೆ ಅಲ್ಲಿ ಅರ್ಜಿ ಸಲ್ಲಿಸಿ.
ಶುಲ್ಕ ಪಾವತಿ ವಿವರ:
- ಪೇಮೆಂಟ್ ವಿಭಾಗಕ್ಕೆ ಭೇಟಿ ನೀಡಿ
- ಅರ್ಜಿ ಸಂಖ್ಯೆಯನ್ನು ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ
- ಆನ್ಲೈನ್ ಮೂಲಕ ಶುಲ್ಕವನ್ನು ಪಾವತಿಸಬೇಕು
- ಹೀಗೆ ಪಾವತಿಸಿ ಯಶಸ್ವಿಯಾದ ನಂತರ ಲರ್ನರ್ ಲೈಸೆನ್ಸ್ ಆನ್ಲೈನಲ್ಲಿ ದೊರೆಯುತ್ತದೆ ಇಲ್ಲವಾದರೆ ಮನೆಗಳಿಗೆ ಕಳುಹಿಸಲಾಗುತ್ತದೆ
ಅಂತಿಮ ತೀರ್ಮಾನ :-
ಆನ್ಲೈನ್ ಮುಖಾಂತರ ಲರ್ನಿಂಗ್ ಲೈಸೆನ್ಸ್ ಹಾಗೂ ಡ್ರೈವಿಂಗ್ ಲೈಸನ್ಸ್ ಪಡೆಯಲು ನೀವು ನಿಗದಿತ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ದಾಖಲೆಯನ್ನು ಲರ್ನರ್ ಲೈಸೆನ್ಸ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು. ಸಮಯ ಉಳಿತಾಯ ಜೊತೆಗೆ ಪಾರದರ್ಶಕ ಹಾಗೂ ಸರಳತೆಯಿಂದಾಗಿ ನೀವು ಉತ್ತಮವಾಗಿ ಡಿಜಿಟಲ್ ಸೇವೆಯಿಂದ ಈ ಎಲ್ಲಾ ಸುಲಭವಾಗಿ ಹಂತ ಹಂತವಾಗಿ ಆನ್ಲೈನ್ ಮುಖಾಂತರ ಪಡೆಯಬಹುದು.











