ನಮಸ್ಕಾರ ಸ್ನೇಹಿತರೆ, ಮಲೆನಾಡಿನ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಮಹತ್ವದ ಸಂಚಲನ ಮೂಡಿಬಂದಿದೆ. ಶಿವಮೊಗ್ಗ, ಸಾಗರ ಹಾಗೂ ತೀರ್ಥಹಳ್ಳಿಯ ವಿವಿಧ ಮಾರುಕಟ್ಟೆಯ ಮಲೆನಾಡಿನ ಚಿನ್ನ ಎಂದೇ ಕರೆಯಲಾಗುವ ಅಡಿಕೆ ಬೆಲೆಗಳಲ್ಲಿ ಸ್ಥಿರತೆಯನ್ನು ಕಂಡಿದ್ದು, ಅಡಿಕೆ ಬೆಳೆಗಾರರಿಗೆ ಸಂತಸವನ್ನು ತಂದುಕೊಟ್ಟಿದೆ.
ಇಂದು ಅಂದರೆ 25-02-2026 ರಲ್ಲಿ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆಗಳ ಬೆಲೆಗಳು ಎಷ್ಟಿದೆ? ಯಾವ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಹೆಚ್ಚಿದೆ? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಮಲೆನಾಡಿನ ಪ್ರತಿ ದಿನದ ಅಡಿಕೆ ಧಾರಣೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಲ್ನಾಡ್ ನ್ಯೂಸ್.ಇನ್ ಗೆ ಭೇಟಿ ನೀಡಿ.

ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯ ವಿವರ:
ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೂ ಕೂಡ ತಾವು ಬೆಳೆದ ಅಡಿಕೆಯನ್ನು ಒಳ್ಳೆಯ ಬೆಲೆಗೆ ಮಾರಾಟಮಾಡಬೇಕು ಎನ್ನುವ ಬಯಕೆಗಳಿರುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಇಂದಿನ ಅಡಿಕೆ ಧಾರಣೆ ಎಷ್ಟಿದೆ ಎನ್ನುವುದರ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ. ಅವರಿಗಾಗಿ ಈ ಮಾಹಿತಿ. ಈ ಕೆಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯ ಬಗ್ಗೆ ಮಾಹಿತಿ ನೀಡಲಾಗಿದೆ .
ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದಿನ (25-02-2026) ಅಡಿಕೆ ಧಾರಣೆಯ ವಿವರ (ಪ್ರತಿ ಕ್ವಿಂಟಲ್ ಗೆ ):
| ಅಡಿಕೆಯ ವಿಧಗಳು | ಕನಿಷ್ಠ ದರ (₹) | ಗರಿಷ್ಟ ದರ (₹) |
| ಸಿಪ್ಪೆಗೋಟು | ₹14,000 | ₹19,010 |
| ಗೊರಬಲು | ₹24,009 | ₹43,169 |
| ರಾಶಿ | ₹47,119 | ₹58,599 |
| ಸರಕು | ₹53,600 | ₹95,310 |
| ಬೆಟ್ಟೆ | ₹52,710 | ₹72,514 |
ಸಾಗರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯ ವಿವರ:
| ಅಡಿಕೆಯ ವಿಧಗಳು | ಕನಿಷ್ಠ ದರ (₹/ಕ್ವಿಂಟಲ್) | ಗರಿಷ್ಟ ದರ (₹/ಕ್ವಿಂಟಲ್) |
| ಸಿಪ್ಪೆಗೋಟು | ₹11,369 | ₹35,399 |
| ಬಿಳೆಗೋಟು | ₹24,199 | ₹39,599 |
| ಹೊಸ ರಾಶಿ | ₹23,899 | ₹55,699 |
| ಕೆಂಪುಗೋಟು | ₹21,699 | ₹45,869 |
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯ ವಿವರ:
| ಅಡಿಕೆಯ ವಿಧಗಳು | ಕನಿಷ್ಠ ದರ (₹) | ಗರಿಷ್ಟ ದರ (₹) |
| ಸಿಪ್ಪೆಗೋಟು | ₹14,000 | ₹40,000 |
| ಗೊರಬಲು | ₹28,000 | ₹41,499 |
| ರಾಶಿ | ₹46,000 | ₹56,599 |
| ಸರಕು | ₹55,000 | ₹96,040 |
| ಬೆಟ್ಟೆ | ₹52,000 | ₹72,000 |
ಇಂದಿನ ಮಾರುಕಟ್ಟೆ ಪ್ರವೃತ್ತಿ ಹೇಗಿದೆ:
- ಇಂದಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಅಡಿಕೆಯ ಬೆಲೆ ಸ್ಥಿರವಾಗಿದ್ದು, ಪ್ರಮಾಣಿತ ಗುಣಮಟ್ಟದ, ಚನ್ನಾಗಿ ಒಣಗಿರುವ ಹಾಗೂ ಉತ್ತಮ ಬಣ್ಣವಿರುವ ಅಡಿಕೆಗಳ ಖರೀದಿಗೆ ವ್ಯಾಪಾರಸ್ಥರು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.
- ಮಾಧ್ಯಮ ಗುಣಮಟ್ಟದ ಅಡಿಕೆಗಳಿಗೆ ಮಿತವಾದ ಸ್ಪಂದನೆ ದೊರೆತಿದ್ದು, ಬೆಲೆಗಳಲ್ಲಿ ಅಷ್ಟೇನು ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.
- ಕೆಲವೆಡೆ ಅಡಿಕೆ ಬೆಳೆಗಾರರು ಮುಂದಿನ ದಿನಮಾನಗಳಲ್ಲಿ ಅಡಿಕೆ ಬೆಲೆ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಅಡಿಕೆಯನ್ನು ಮಾರುಕಟ್ಟೆಗೆ ನೀಡದೆ ಕೆಲವುಗಳನ್ನು ಮನೆಯಲ್ಲಿ ಉಳಿಸಿಕೊಳ್ಳುತ್ತಿದ್ದಾರೆ.
ಮಾರುಕಟ್ಟೆಗಳ ವರದಿ ಬಗ್ಗೆ:
- ಶಿವಮೊಗ್ಗ ಮಾರುಕಟ್ಟೆಯಲ್ಲಿ ಕೆಲವು ವಿಧದ ಅಡಿಕೆಗಳ ಬೆಲೆಯೂ ಗಣನೀಯವಾಗಿ ಏರಿಕೆ ಕಂಡರೆ, ಇನ್ನು ಕೆಲವು ವಿಧದ ಅಡಿಕೆಗಳ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಕೆಲವು ದಿನಗಳಿಂದ ಅಡಿಕೆಯ ಆಮದು ಕಡಿಮೆಯಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ವಿವಿಧ ಪ್ರದೇಶಗಳ ಮಾರಾಟಗಾರರಿಂದ ಬೆಟ್ಟೆ ಮತ್ತು ರಾಶಿ ಅಡಿಕೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಪ್ರತಿ ಕ್ವಿಂಟಲ್ ಗೆ ಬೆಲೆಯ ಪ್ರಮಾಣದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.
- ತೀರ್ಥಹಳ್ಳಿಯ ಇಂದಿನ ಮಾರುಕಟ್ಟೆಯಲ್ಲಿ ಸರಕು ಅಡಿಕೆಗೆ ಭಾರಿ ಡಿಮ್ಯಾಂಡ್ ಇದ್ದು, ಬೆಳೆಗಳಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ.
- ಸಾಗರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆಯಲ್ಲಿ ಯಾವುದೇ ಏರಿತಗಳಾಗದೆ, ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಅಡಿಕೆ ಬೆಳೆಗಾರರಿಗೆ ನನ್ನದೊಂದು ಸಲಹೆ:
ಅಡಿಕೆ ಬೆಳೆಗಾರರೆ, ನೀವೇನಾದರೂ ನೀವು ಬೆಳೆದ ಅಡಿಕೆಯನ್ನು ಮಾರುಕಟ್ಟೆಗೆ ಮಾರಾಟ ಮಾಡಬೇಕೆಂದು ಬಯಸಿದರೆ ಅಡಿಕೆಯು ಸರಿಯಾಗಿ ಒಣಗಿದೆಯೇ ಇಂದು ಗಮನಿಸಿ ಹಾಗೂ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ಎನ್ನುವುದನ್ನು ಗಮನಿಸಿ ನಂತರ ಮಾರಾಟ ಮಾಡಿ. ಚನ್ನಾಗಿ ಒಣಗಿರುವ ಅಡಿಕೆಗಳಿಗೆ ಮಾತ್ರ ಹೆಚ್ಚಿನ ಬೆಳೆಯನ್ನು ನಿಗದಿಪಡಿಸಲಾಗುವುದು ಹಾಗೂ ದಿನೇ ದಿನೇ ಅಡಿಕೆ ಬೆಳೆಗಳಲ್ಲಿ ಏರಿಳಿತ ಕಂಡುಬರುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದಿನ ಸರಕು ಅಡಿಕೆ ದರ ಕನಿಷ್ಠ ₹53,600 ದಿಂದ ಗರಿಷ್ಟ ₹95,310 ಇದೆ.
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಇಂದಿನ ಸರಕು ಅಡಿಕೆ ದರ ₹55,000 ದಿಂದ ₹96,040 ಇದೆ.
ಸಾಗರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಅಡಿಕೆ ದರದಲ್ಲಿ ಸ್ಥಿರವಾಗಿದೆ.
ಇದನ್ನು ಗಮನಿಸಿ: Aasare Scheme: ಒಂಟಿಯಾಗಿ ಬದುಕುತ್ತಿದ್ದೀರಾ? ಭಯ ಬೇಡ! ಬಂದಿದೆ ಆಸರೆ ಯೋಜನೆ










