ನಮಸ್ಕಾರ ಸ್ನೇಹಿತರೆ, ನಿಮಗೇನಾದರೂ ಬಿಪಿ ಹಾಗೂ ಶುಗರ್ ಟೆಸ್ಟ್ ಗೆ ಪದೇ ಪದೇ ಆಸ್ಪತ್ರೆಗೆ ಹೋಗಬೇಕಲ್ಲ ಅಂತ ಚಿಂತೆ ಆಗುತ್ತಿದೆಯಾ? ಆರೋಗ್ಯದ ಕುರಿತು ಅಸಡ್ಡೆ ತೋರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಬಹುದು ಎನ್ನುವ ಭಯ ಇದೆಯಾ? ಹಾಗಿದ್ದರೆ ಈ ಚಿಂತೆ ಹಾಗೂ ಭಯಕ್ಕೆ ಇಂದೇ ಫುಲ್ಸ್ಟಾಪ್ ಹಾಕಿ.
Gruha Arogya Scheme in Kannada
ಆರೋಗ್ಯವೇ ಭಾಗ್ಯ ಎನ್ನುವ ಗಾದೆಮಾತಿನಂತೆ, ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಯಾವುದೇ ಸಾಧನೆಯನ್ನು ಮಾಡಬಹುದು ಹಾಗೂ ಗುಣಮಟ್ಟದ ಜೀವನವನ್ನು ನಡೆಸಬಹುದು. ಆದರೆ ಸಾಕಷ್ಟು ಜನಸಾಮಾನ್ಯರು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ ತೋರಿಸುತ್ತ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇವರ ಈ ನಿರ್ಲಕ್ಷಕ್ಕೆ ಆರ್ಥಿಕ ಸಮಸ್ಯೆ ಕಾರಣ ಆಗಿರಬಹುದು ಅಥವಾ ಸಮಯದ ಅಭಾವವಿರಬಹುದು.
ಹಾಗಾಗಿ ಕರ್ನಾಟಕ ಸರ್ಕಾರವು ನಿಮ್ಮ ಆರೋಗ್ಯ ಭರ್ದತೆಗೆ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಪದೇ ಪದೇ ಆಸ್ಪತ್ರೆಗೆ ಹೋಗಿ ಕ್ಯೂ ನಿತ್ತು ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ನೇರವಾಗಿ ಮನೆಯಲ್ಲೇ ಕುಳಿತು ಉಚಿತವಾಗಿ ವಿವಿಧ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಮಾಹಿತಿ ಕೇಳಿ ಯಾವುದು ಆ ಯೋಜನೆ? ಎನ್ನುವ ಗೊಂದಲ ನಿಮ್ಮಲಿ ಮೂಡಿರಬಹುದು. ಈ ಎಲ್ಲಾ ಗೊಂದಲಗಳ ನಿವಾರಣೆಗೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಈ ಒಂದು ಲೇಖನದ ಮೂಲಕ ಜನಸಾಮಾನ್ಯರ ಆರೋಗ್ಯ ಭದ್ರತೆಗೆ ಜಾರಿಗೊಳಿಸಿದ ಯೋಜನೆ ಯಾವುದು? ಈ ಯೋಜನೆಯನ್ನು ಜಾರಿಗೊಳಿಸಿರುವುದರ ಉದ್ದೇಶವೇನು? ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕೇ? ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಲಿದೆಯೇ? ಎನ್ನುವ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಗಿದೆ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮಲ್ನಾಡ್ ನ್ಯೂಸ್.ಇನ್ ಗೆ ಭೇಟಿ ನೀಡಿ.
ಯೋಜನೆಯ ಅವಲೋಕನ:
| ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ | ಕರ್ನಾಟಕ ಸರ್ಕಾರ |
| ಯೋಜನೆಯ ಹೆಸರು | ಗೃಹ ಆರೋಗ್ಯ ಯೋಜನೆ (Gruha Arogya Scheme) |
| ಅರ್ಹ ಫಲಾನುಭವಿಗಳು | 30 ವರ್ಷ ಮೇಲ್ಪಟ್ಟ ನಾಗರೀಕರು |
| ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ | ಯಾವುದೇ ರೀತಿಯ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ |
ಏನಿದು ಗೃಹ ಆರೋಗ್ಯ ಯೋಜನೆ?
ಗೃಹ ಆರೋಗ್ಯ ಯೋಜನೆ (Gruha Arogya Scheme) ಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ನಾಗರೀಕ ಆರೋಗ್ಯ ಭದ್ರತಾ ಯೋಜನೆಯಾಗಿದ್ದು, 30 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಆಸ್ಪತ್ರೆಗೆ ಬರಲು ಸಾಧ್ಯವಿಲ್ಲದ, ಆರ್ಥಿಕ ಸಂಕಷ್ಟದಲ್ಲಿರುವ ನಾಗರೀಕರಿಗೆ ಅವರ ಮನೆಯ ಬಾಗಿಲಿಗೆ ಹೋಗಿ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಹಾಗೂ ಉಚಿತ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಗೃಹ ಆರೋಗ್ಯ ಯೋಜನೆಯ ಉದ್ದೇಶ:
1. ಸಾಂಕ್ರಾಮಿಕವಲ್ಲದ ರೋಗಗಳ ಪತ್ತೆ:
ಕರ್ನಾಟಕದ ನಾಗರೀಕರಲ್ಲಿ ಕೆಲವರಿಗೆ ತಮ್ಮಲ್ಲಿ ವಿವಿಧ ಕಾಯಿಲೆಗಳಿರುವುದು ತಿಳಿಸಿರುವುದಿಲ್ಲ. ಹಾಗಾಗಿ ಕರ್ನಾಟಕ ಸರ್ಕಾರವು ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಬಿಪಿ, ಶುಗರ್, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಗಳಂತಹ ಸಾಂಕ್ರಾಮಿಕವಲ್ಲದ ರೋಗಗಳನ್ನು ಪ್ರಾರಂಭಿಕ ಹತದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಯನ್ನು ಒದಗಿಸುವ ಮೂಲಕ ಪ್ರಾಣ ಹಾನಿಯಾಗುವುದನ್ನು ತಡೆಗಟ್ಟುವುದು.
2. ಗೃಹ ಆರೋಗ್ಯ ಸೇವೆ:
ಜನಸಾಮಾನ್ಯರು ಆರೋಗ್ಯ ತಪಾಸಣೆಗೆಂದು ಗಂಟೆಗಟ್ಟಲೆ ಆಸ್ಪತ್ರೆಯಲ್ಲಿ ಕ್ಯೂ ನಿಲ್ಲುವುದನ್ನು ತಪ್ಪಿಸಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಅವರುಗಳ ಆರೋಗ್ಯವನ್ನು ತಪಾಸಣೆ ಮಾಡುವುದು ಹಾಗೂ ಉಚಿತ ಚಿಕಿತ್ಸೆಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
3. ಆನ್ಲೈನ್ ಆರೋಗ್ಯ ದಾಖಲೆ:
ಆರೋಗ್ಯ ಅಧಿಕಾರಿಗಳು ಪ್ರತಿಯೊಬ್ಬ ವಕ್ತಿಯ ಆರೋಗ್ಯ ಮಾಹಿತಿಯನ್ನು ಅಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಮೂಲಕ ಡಿಜಿಟಲೀಕರಣ ಗೊಳಿಸುವ ಮೂಲಕ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಅವುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ನೆರವಾಗುವುದು.
4. ಮರಣದರ ಕಡಿತ:
ಎಷ್ಟೋ ನಾಗರೀಕರಿಗೆ ತಮ್ಮಲ್ಲಿರುವ ಕಾಯಿಲೆಗಳ ಬಗ್ಗೆ ತಿಳಿಯದೆ ಕಾಯಿಲೆಗಳು ಗಂಭೀರ ಹಂತಕ್ಕೆ ತಲುಪಿದಾಗ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ನೀಡಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಎಷ್ಟೋ ಜರನು ಸಾವನ್ನಪ್ಪುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಮನೆ ಮನೆಗೆ ಭೇಟಿ ನೀಡಿ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವ ಮೂಲಕ ಮರಣದರವನ್ನು ಕಡಿಮೆ ಮಾಡುವುದು.
5. ಔಷಧಿಗಳ ಉಚಿತ ವಿತರಣೆ:
ಮನೆ ಮನೆಗೆ ಭೇಟಿ ನೀಡಿ ಉಚಿತ ತಪಾಸಣೆ ನಡೆಸಿ, ಏನಾದರೂ ರೋಗ ಲಕ್ಷಣಗಳು ಕಂಡುಬಂದರೆ ಆ ರೋಗಗಳಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಮಾತ್ರೆಗಳನ್ನು ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ಸಂಪೂರ್ಣ ಉಚಿತವಾಗಿ ಒದಗಿಸುವುದು.
ಗೃಹ ಆರೋಗ್ಯ ಯೋಜನೆಯಿಂದ ಜನಸಾಮಾನ್ಯರಿಗೆ ಆಗುವ ಲಾಭಗಳು:
1. ಉಚಿತ ತಪಾಸಣೆ:
ಜನಸಾಮಾನ್ಯರು ಒಂದು ರೂಪಾಯಿ ಖರ್ಚಿಲ್ಲದೆ ಉಚಿತವಾಗಿ ಮನೆಯಲ್ಲೇ ಕುಳಿತು ಬಿಪಿ, ಶುಗರ್, ಕ್ಯಾನ್ಸರ್ ಹಾಗೂ 14 ಕ್ಕೂ ಹೆಚ್ಚು ಸಾಂಕ್ರಾಮಿಕವಲ್ಲದ ರೋಗಗಳನ್ನು ಪರಿಶೀಲನೆ ಮಾಡಿಸಿಕೊಳ್ಳಬಹುದು.
2. ಉಚಿತ ಔಷಧಿ ಕಿಟ್:
ಮೊದಲು ತಪಾಸಣೆ ಮಾಡುವಾಗಲೇ ಬಿಪಿ ಹಾಗೂ ಶುಗರ್ ಇರುವುದು ಕಂಡುಬಂದರೆ, ತಕ್ಷಣದಲ್ಲೇ ಬಿಪಿ ಹಾಗೂ ಶುಗರ್ ಗೆ ಸಂಬಂಧಿಸಿದ ಒಂದು ತಿಂಗಳ ಉಚಿತ ಔಷಧಿ ಕಿಟ್ ಅನ್ನು ಸ್ಥಳದಲ್ಲೇ ವಿತರಣೆ ಮಾಡಲಾಗುತ್ತದೆ.
3. ಹಣ ಮತ್ತು ಸಮಯ ಎರಡರ ಉಳಿತಾಯ:
ಸಾಕಷ್ಟು ವ್ಯಕ್ತಿಗಳು ಸಮಯದ ಅಭಾವದಿಂದ ಹಾಗೂ ಆರ್ಥಿಕ ಸಮಸ್ಯೆಯಿಂದ ಆರೋಗ್ಯ ತಪಾಸಣೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಅಂತಹ ವ್ಯಕ್ತಿಗಳು ಮನೆಯಲ್ಲೇ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಆಸ್ಪತ್ರೆಗೆ ಅಳಿಯುವ ತಲೆ ಬಿಸಿ ಇರುವುದಿಲ್ಲ, ಹಾಗೂ ಯಾವುದೇ ಹಣಕಾಸಿನ ಅಗತ್ಯ ಇರುವುದಿಲ್ಲ.
4. ಪ್ರಾರಂಭಿಕ ಹಂತದಲ್ಲೇ ರೋಗಗಳನ್ನು ಗುರುತಿಸುವಿಕೆ:
ಎಷ್ಟೋ ಜನ ತಮ್ಮಲ್ಲಿ ರೋಗಲಕ್ಷಣಗಳು ಕಂಡುಬಂದಿದ್ದರೂ ಕೂಡ, ಆ ರೋಗಲಕ್ಷಣಗಳನ್ನು ನಿರ್ಲಕ್ಷ ಮಾಡುತ್ತಾರೆ. ನಂತರದ ದಿನಗಳಲ್ಲಿ ಅವರ ರೋಗ ಕ್ರಿಟಿಕಲ್ ಕಂಡೀಶನ್ ಗೆ ಬಂದು ತಲುಪುತ್ತದೆ. ನಂತರ ಅವರು ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ತಲುಪುತ್ತಾರೆ. ಆದರೆ ಈ ರೀತಿ ಮನೆ ಮನೆಗೆ ಬಂದು ಉಚಿತವಾಗಿ ತಪಾಸಣೆ ಮಾಡುವುದರಿಂದ ಪ್ರಾರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆ ಹಚ್ಚಿ ಅದಕ್ಕೆ ಸಂಬಂಧಿಸಿದ ಆರೋಗ್ಯ ಚಿಕಿತ್ಸೆಯನ್ನು ಪಡೆಯುವ ಮೂಲಕ ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು.
ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಯಾರು ಅರ್ಹರು?
- ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಗಳು ಕರ್ನಾಟಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸವಿದ್ದರು ಕೂಡ ಅರ್ಜಿ ಸಲ್ಲಿಸಲು ಅರ್ಹರು.
- ಕನಿಷ್ಠ 30 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ನೀವೇನಾದರೂ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿದ್ದರೂ ಕೂಡ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
- ಮಹಿಳೆ ಹಾಗೂ ಪುರುಷರಿಬ್ಬರೂ ಕೂಡ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
| ಇಲ್ಲಿ ಗಮನಿಸಿ: “ನೀವೇನಾದರೂ ರಕ್ತ ಹೀನತೆಯಿಂದ ಬಳಲುತ್ತಿದ್ದರೆ, ನಿಮ್ಮ ವಯಸ್ಸು 19 ರಿಂದ 29 ವರ್ಷ ವಯೋಮಿತಿಯನ್ನು ಹೊಂದಿದ್ದರೂ ಕೂಡ ಗೃಹ ಆರೋಗ್ಯ ಯೋಜನೆ (Gruha Arogya Scheme) ಯಡಿಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ.” |
ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಹಿಂದಿನ ವೈದ್ಯಕೀಯ ದಾಖಲೆಗಳು (ನಿಮಗೆ ಮೊದಲೇ ಬಿಪಿ ಶುಗರ್ ಗಳಂತಹ ಸಾಂಕ್ರಾಮಿಕವಲ್ಲದ ರೋಗಗಳಿದ್ದರೆ)
- ಆಯುಷ್ಮನ್ ಭಾರತ್ ಆರೋಗ್ಯ ಕಾರ್ಡ್ (ಈ ಮೊದಲು ಹೊಂದಿದ್ದರೆ ಮಾತ್ರ)
ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಅರ್ಜಿ ಸಲ್ಲಿಸಬೇಕೇ?
ಸರ್ಕಾರ ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸಿದರೂ ಕೂಡ ಜನಸಾಮಾನ್ಯರಲ್ಲಿ ಮೊದಲು ಮೂಡುವ ಪ್ರಶ್ನೆ ಜಾರಿಗೊಳಿಸಿದ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾ? ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾ? ಎನ್ನುವುದು. ಅದೇ ರೀತಿಯಲ್ಲಿ ಗೃಹ ಆರೋಗ್ಯ ಯೋಜನೆ (Gruha Arogya Scheme) ಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಗೊಂದಲಗಳಿರುತ್ತದೆ.
- ಆದರೆ, ಎಲ್ಲಾ ಯೋಜನೆಗಳಂತೆ ಗೃಹ ಆರೋಗ್ಯ ಯೋಜನೆಗೆ ಯಾವುದೇ ರೀತಿಯ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಬದಲಾಗಿ ನಿಮ್ಮ ಊರಿನ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಇಲಾಖಾ ಸಿಬ್ಬಂದಿಗಳು ನಿಮ್ಮ ಮನೆಗೆ ನೇರವಾಗಿ ಭೇಟಿ ನೀಡುತ್ತಾರೆ.
- ನಂತರ ನಿಮ್ಮ ಆಧಾರ್ ಹಾಗೂ ಫೋನ್ ನಂಬರ್ ಬಳಸಿಕೊಂಡು ಕರ್ನಾಟಕದ ಅಧಿಕೃತ ಪೋರ್ಟಲ್ NCD ನಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ.
- ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನೀವು ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.
ಕೊನೆಯ ಮಾತು:
ಪ್ರತಿಯೊಬ್ಬ ನಾಗರೀಕರು ಸಾಮಾನ್ಯವಾಗಿ ನನಗೆ ಯಾವುದಾದರು ರೋಗ ಇರಬಹುದು, ಆಸ್ಪತ್ರೆಗೆ ಹೋದರೆ ಭಯ ಪಡಿಸುತ್ತಾರೆ ಎಂದುಕೊಂಡು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಲು ಹೋಗದೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಾರೆ. ಆದರೆ ಯಾವುದೇ ವ್ಯಕ್ತಿಯ ಆರೋಗ್ಯ ಸರಿ ಇದ್ದರೆ ಮಾತ್ರ ಗುಣಮಟ್ಟದ ಜೀವನವನ್ನು ನಡೆಸಲು ಸಾಧ್ಯ. ಹಾಗಾಗಿ ನಿಮ್ಮ ಮನೆಗೆ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಇಲಾಖಾ ಸಿಬ್ಬಂದಿಗಳು ಬಂದು ತಪಾಸಣೆ ಮಾಡುವಾಗ ಉಚಿತವಾಗಿ ತಪಾಸಣೆ ಮಾಡಿಸಲು ಹಿಂದೇಟು ಹಾಕಬೇಡಿ. ಒಂದುವೇಳೆ ನಿಮ್ಮಲ್ಲಿ ಏನಾದರು ರೋಗಲಕ್ಷಣಗಳು ಕಂಡುಬಂದರೂ ಕೂಡ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ನೀವು ನಿಮ್ಮಲ್ಲಿರುವ ರೋಗಗಳಿಂದ ಚೇತರಿಸಿಕೊಳ್ಳಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಪ್ರತಿಯೊಬ್ಬ ನಾಗರೀಕನ ಮನೆಗೆ ಭೇಟಿ ನೀಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ನೀಡುವ ಸರ್ಕಾರದ ಒಂದು ಯೋಜನೆಯಾಗಿದೆ.
ಗೃಹ ಆರೋಗ್ಯ ಯೋಜನೆ (Gruha Arogya Scheme) ಯನ್ನು ಕರ್ನಾಟಕ ಸರ್ಕಾರವು ಜಾರಿಗೊಳಿಸಿತು.
ಸಾಂಕ್ರಾಮಿಕವಲ್ಲದ ರೋಗಗಳನ್ನು ಪತ್ತೆ ಹಚ್ಚಿ, ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಗೃಹ ಆರೋಗ್ಯ ಯೋಜನೆ (Gruha Arogya Scheme) ಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಗೃಹ ಆರೋಗ್ಯ ಯೋಜನೆ (Gruha Arogya Scheme) ಯು 30 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಹಿಳೆ ಹಾಗೂ ಪುರುಷರಿಗೆ ಈ ಯೋಜನೆ ಅನ್ವಯವಾಗಲಿದೆ.







