ನಮಸ್ಕಾರ ಸ್ನೇಹಿತರೆ, ನೀವೇನಾದರೂ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದೀರಾ? ನೀವು ಒಬ್ಬಂಟಿಯಾಗಿ ಜೀವನ ಮಾಡಲು ಭಯ ಆಗುತ್ತಿದೀಯಾ? ನಿಮ್ಮ ಈ ಭಯ ಮತ್ತು ಆತಂಕಕ್ಕೆ ಇಂದೇ ಫುಲ್ಸ್ಟಾಪ್ ನೀಡಿ. ಏಕೆಂದರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಒಂಟಿ ಮಹಿಳೆಯಾರ ಹಾಗೂ ಹಿರಿಯ ನಾಗರೀಕರ ಸುರಕ್ಷತೆಗಾಗಿ ಹಾಗೂ ಯೋಗಕ್ಷೇಮಕ್ಕಾಗಿ ಆಸರೆ ಯೋಜನೆ (Aasare Scheme) ಯನ್ನು ಜಾರಿಗೊಳಿಸಿದೆ.
Aasare Scheme in Kannada
ಬಾಲ್ಯದಲ್ಲಿ ತಂದೆ-ತಾಯಿಯ ಆಸರೆ, ಯವ್ವನದಲ್ಲಿ ಗಂಡನ ಆಸರೆ ಹಾಗೂ ಮುಪ್ಪಿನಲ್ಲಿ ಮಕ್ಕಳ ಆಸರೆ ಎನ್ನುವ ಗಾದೆ ಮಾತನ್ನು ಕೇಳಿರುತ್ತೀರಾ? ಈ ಗಾದೆಮಾತಿನಂತೆ ವಯಸ್ಸಾದ ತಂದೆ-ತಾಯಿಯನ್ನು ಚನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಆದರೆ, ಇಂದಿನ ಯುಗದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಅವರ ಊರಲ್ಲೇ ಬಿಟ್ಟು ಉದ್ಯೋಗಕ್ಕೆಂದು ಬೇರೆ ಊರಿಗೆ ಹೋಗುತ್ತದೆ. ಬೇರೆ ಊರಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಆದರೆ ವಯಸ್ಸಾದ ತಂದೆ-ತಾಯಿ ತಮ್ಮ ಮುಪ್ಪಿನ ಸಮಯದಲ್ಲಿ ಮಕ್ಕಳ ಆಸರೆ ಬಯಸುತ್ತಾರೆ.
ಅದೇ ರೀತಿ ಮದುವೆಯಾದ ಮಹಿಳೆಗೆ ತಮ್ಮ ಗಂಡನ ಆಸರೆ ಅಗತ್ಯವಾಗಿರುತ್ತದೆ. ಆದರೆ, ಗಂಡನ ಅನಿರೀಕ್ಷಿತ ಮರಣದಿಂದ ಅಥವಾ ವಿವಾಹ ವಿಚ್ಛೇದನದಿಂದ ಮಹಿಳೆಯು ಒಂಟಿಯಾಗಿ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಒಂಟಿ ಮಹಿಳೆ ಹಾಗೂ ಹಿರಿಯ ನಾಗರೀಕರಿಗೆ ಧೈರ್ಯ ತುಂಬಲು ಈ ಆಸರೆ ಯೋಜನೆಯನ್ನು (Aasare Scheme) ಜಾರಿಗೊಳಿಸಲಾಗಿದೆ.

ಆಸರೆ ಯೋಜನೆ (Aasare Scheme) ಯಡಿಯಲ್ಲಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಹೇಗೆ ಸುರಕ್ಷತೆಯನ್ನು ಒದಗಿಸಲಾಗುತ್ತದೆ? ಆಸರೆ ಯೋಜನೆಯಡಿಯಲ್ಲಿ ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರು ನೋಂದಾಯಿಸಿ ಕೊಳ್ಳುವುದು ಹೇಗೆ? ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶವೇನು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಲ್ನಾಡ್ ನ್ಯೂಸ್.ಇನ್ ಗೆ ಭೇಟಿ ನೀಡಿ.
ಯೋಜನೆಯ ಅವಲೋಕನ
| ಯೋಜನೆಯ ಹೆಸರು | ಆಸರೆ ಯೋಜನೆ (Aasare Scheme) |
| ಯೋಜನೆಯನ್ನು ಜಾರಿಗೊಳಿಸಿದ ಇಲಾಖೆ | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ |
| ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾದ ಅಭ್ಯರ್ಥಿಗಳು | ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರು |
ಏನಿದು ಆಸರೆ ಯೋಜನೆ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇತ್ತೀಚಿಗೆ ಜಾರಿಗೊಳಿಸಿದ ಯೋಜನೆಯೇ ಆಸರೆ ಯೋಜನೆ (Aasare Scheme) ಯಾಗಿದೆ. ಈ ಆಸರೆ ಯೋಜನೆಯಡಿಯಲ್ಲಿ ಒಂಟಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದು ಹಾಗೂ ಅವರಿಗೆ ಧೈರ್ಯವನ್ನು ತುಂಬುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆಸರೆ ಯೋಜನೆಯ ಮುಖ್ಯ ಉದ್ದೇಶ:
1. ಹಿರಿಯ ನಾಗರೀಕರ ಹಾಗೂ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆ:
ಒಂಟಿಯಾಗಿ ಇರುವ ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಸುರಕ್ಷತೆಯನ್ನು ಹಾಗೂ ಭದ್ರತೆಯನ್ನು ಒದಗಿಸಿ ಅವರಿಗೆ ರಕ್ಷಣೆ ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಾವೆಲ್ಲ ನೋಡುತ್ತಿರುವ ಹಾಗೆ ಒಂಟಿ ಮಹಿಳೆ ವಾಸಿಸುತ್ತಿರುವ ಮನೆಗಳಲ್ಲಿ ಹಾಗೂ ವೃದ್ಧರಿರುವ ಮನೆಗಳಲ್ಲಿ ಹೆಚ್ಚಿನ ಕಳ್ಳತನ, ದರೋಡೆ ಹಾಗೂ ದೈಹಿಕ ದೌರ್ಜನ್ಯಗಳು ನಡೆಯುತ್ತಿದೆ.
ಇಂತಹ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆಯು ಆಸರೆ ಎನ್ನುವ ಯೋಜನೆಯನ್ನು ಜಾರಿಗೊಳಿಸಿದೆ. ಜೊತೆಗೆ ಪೊಲೀಸರು ಒಂಟಿ ಮಹಿಳೆಯರ ಹಾಗೂ ಹಿರಿಯ ನಾಗರೀಕರ ಮನೆಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಹಾಗೂ ಅಪರಾಧಿಗಳಿಗೆ ಭಯ ಹುಟ್ಟುತ್ತದೆ.
2. ತುರ್ತು ಸಂದರ್ಭದಲ್ಲಿ ತಕ್ಷಣದ ಕಾರ್ಯಾಚರಣೆ:
ಒಂಟಿ ಮಹಿಳೆಯರ ಹಾಗೂ ಹಿರಿಯ ನಾಗರೀಕರ ಎಲ್ಲಾ ಡೇಟಾ ಬೇಸ್ ಗಳು ಪೋಲೀಸರ ಕೈಯಲ್ಲಿರುವುದರಿಂದ ಯಾವುದೇ ಅನಿರೀಕ್ಷಿತ ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಪೊಲೀಸರು ತುರ್ತು ಕರೆ ಬಂದ ಸ್ಥಳವನ್ನು ಹುಡುಕುತ್ತ ಸಮಯವನ್ನು ವ್ಯರ್ಥ ಮಾಡದೇ ತಕ್ಷಣವೇ ಆಂಬುಲೆನ್ಸ್ ಗಳನ್ನು ನೇರವಾಗಿ ಮನೆಗೆ ತಲುಪಿಸುತ್ತಾರೆ.
3. ವಂಚನೆಯನ್ನು ತಡೆಗಟ್ಟುವುದು ಹಾಗೂ ಅಪರಾಧಗಳ ಕುರಿತು ಜಾಗೃತಿ ಮೂಡಿಸುವುದು:
ಆಸರೆ ಯೋಜನೆಯಡಿಯಲ್ಲಿ ಪೊಲೀಸರು ಒಂಟಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಯಾವುದೇ ಅಪರಿಚಿತ ಹಾಗೂ ಅನುಮಾನಸ್ಪದ ವ್ಯಕ್ತಿಗಳು ನಿಮ್ಮ ಮನೆಯ ಮುಂದೆ ಓಡಾಡುತ್ತಿದ್ದರೆ, ಮಾಹಿತಿಯನ್ನು ನೀಡಲು ತಿಳಿಸುತ್ತಿದ್ದು, ಹಾಗೂ ಸೈಬರ್ ಗಳಲ್ಲಾಗುವ ವಂಚನೆಗಳ ಕುರಿತು ಜಾಗೃತಿಯ ಮಾತುಗಳನ್ನು ಹೇಳುವ ಮೂಲಕ ಅವರುಗಳನ್ನು ವಂಚನೆಗಳಿಂದ ದೂರವುಳಿಯುವಂತೆ ಪ್ರೇರೇಪಿಸುತ್ತಾರೆ.
4. ಮಾನಸಿಕ ಧೈರ್ಯ ಹಾಗೂ ಒಂಟಿತನ ನಿವಾರಣೆ:
ಪೊಲೀಸ್ ಇಲಾಖೆಯು ಈ ಯೋಜನೆಯಡಿಯಲ್ಲಿ ಕೇವಲ ಯಾರ ಆಸರೆಯೂ ಇಲ್ಲದೆ ಒಂಟಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಹಾಗೂ ಉದ್ಯೋಗಕ್ಕೆಂದು ಬೇರೆ ಊರಿಗೆ ಹೋಗಿರುವ ಮಕ್ಕಳ ವೃದ್ಧ ತಂದೆ-ತಾಯಿಯರಿಗೆ ಕೇವಲ ಸುರಕ್ಷತೆಯನ್ನು ಮಾತ್ರ ನೀಡದೆ ಅವುಗಳ ಜೊತೆಗೆ ಅವರ ಪರಿಸ್ಥಿತಯನ್ನು ತಿಳಿದು ಅವುಗಳಿಗೆ ಸ್ಪಂದಿಸುವ ಮೂಲಕ ಅವರಲ್ಲಿರುವ ಒಂಟಿತನವನ್ನು ನೀರಾರಿಸುತ್ತಾರೆ ಹಾಗೂ ನಮ್ಮೊಂದಿಗೆ ಸರ್ಕಾರವಿದೆ ಎನ್ನುವ ಭಾವನೆಯನ್ನು ಮೂಡಿಸುತ್ತಾರೆ.
ಆಸರೆ ಯೋಜನೆಯ ಪ್ರಮುಖ ವೈಶಿಷ್ಟ್ಯತೆಗಳು:
1. ಹಿರಿಯ ನಾಗರೀಕರ ಹಾಗೂ ಒಂಟಿ ಮಹಿಳೆಯರ ದತ್ತಾಂಶಗಳನ್ನು ಸಂಗ್ರಹ ಮಾಡುವುದು:
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರ ಸೇರ್ವೆಮಾಡಿ, ಅಂತಹ ಮನೆಗಳಿಗೆ ಭೇಟಿ ನೀಡಿ ಅವರ ವಿಳಾಸ, ಹೆಸರು, ವಯಸ್ಸು, ದೂರವಾಣಿ ಸಂಖ್ಯೆ ಹಾಗೂ ತುರ್ತು ಸಂದಭಗಳಲ್ಲಿ ಅವರ ಮಕ್ಕಳಿಗೆ ಮಾಹಿತಿ ತಿಳಿಸಲು ಅವರ ಮಕ್ಕಳ ದೂರವಾಣಿ ಸಂಖ್ಯೆ ಹಾಗೂ ಇನ್ನಿತರ ದತ್ತಾಂಶಗಳನ್ನು ಸಂಗ್ರಹಿಸುವುದು. ಇದು ಮೊದಲ ಹಂತವಾಗಿದೆ.
2. ಮನೆಗೆ ಭೇಟಿ:
ಪೊಲೀಸರು ಒಂಟಿ ಮಹಿಳೆಯರ ಹಾಗೂ ಹಿರಿಯ ನಾಗರೀಕರ ಮನೆಗೆ ಸಾಮಾನ್ಯವಾಗಿ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಭೇಟಿ ನೀಡಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿ ಮನೆಯ ಹತ್ತಿರ ಓಡಾಡುತ್ತಿದ್ದಾನೆಯೇ? ಯಾವುದಾದರು ನೆರವಿನ ಅಗತ್ಯ ಇದೆಯೇ? ಹೀಗೆ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಇದು ಒಂಟಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ “ನಮಗೆ ಪೊಲೀಸ್ ರಕ್ಷಣೆ ಇದೆ ” ಎನ್ನುವ ಧೈರ್ಯವನ್ನು ತಂದುಕೊಡುತ್ತದೆ.
ಜೊತೆಗೆ ಹಿರಿಯ ನಾಗರೀಕರ ಹಾಗೂ ಒಂಟಿ ಮಹಿಳೆಯರ ಮನೆಯ ಬಳಿಗೆ ಬಿಟ್ ಬುಕ್ ಅಥವಾ ಪಾಯಿಂಟ್ ಬುಕ್ ಸ್ಥಾಪಿಸುವ ಮೂಲಕ ಪೊಲೀಸರು ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.
3. ರಕ್ಷಣೆ ನೀಡುವುದು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವುದು:
ಒಂಟಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಆಸರೆ ಯೋಜನೆಯಡಿಯಲ್ಲಿ ಸಮಾಜ ವಿರೋಧಿ ಅಂಶಗಳಿಂದ ಕಿರುಕುಳ, ಶೋಷಣೆ ಹಾಗೂ ಇನ್ನಿತರ ಸಮಸ್ಯೆಗಳಿಂದ ರಕ್ಷಣೆಯನ್ನು ಹೊರಡಿಸುವುದು. ಹಾಗೂ ಹಿರಿಯ ನಾಗರೀಕರಿಗೆ ಹಾಗೂ ಒಂಟಿ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಕುರಿತು ಅರಿವು ಮೂಡಿಸಲಾಗುತ್ತದೆ.
4. ತುರ್ತು ಸಂದರ್ಭದಲ್ಲಿ ತಕ್ಷಣ ನೆರವು:
ಒಂಟಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಯಾವುದೇ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಉಂಟಾದಾಗ ತುರ್ತು ವೈದ್ಯಕೀಯ ಸಹಾಯ ಅಗತ್ಯವಿದ್ದರೆ ಉಚಿತ ಆಂಬುಲೆನ್ಸ್ ಸೇವೆಗಳನ್ನು ಒದಗಿಸುವ ಮೂಲಕ ಉತ್ತಮ ಆರೋಗ್ಯ ಸೇವೆ ಒದಗುವಂತೆ ಮಾಡುವುದು.
5. ತುರ್ತು ಕರೆಗೆ ತಕ್ಷಣ ಪ್ರತಿಕ್ರಿಯೆ:
ಹಿರಿಯ ನಾಗರೀಕರು ಹಾಗೂ ಒಂಟಿ ಮಹಿಳೆಯರು ಯಾವುದೇ ತುರ್ತು ಸಂದರ್ಭದಲ್ಲೂ ಕರೆ ಮಾಡಿದರೂ ಕೂಡ ಪೊಲೀಸ್ ಸಿಬ್ಬಂದಿಗಳು ಸಮಯವನ್ನು ವ್ಯರ್ಥ ಮಾಡದೇ ತಕ್ಷಣವೇ ಪ್ರತಿಕ್ರಿಯಿಸುವ ಮೂಲಕ ಅವರ ನೆರವಿಗೆ ನಿಲ್ಲುವುದು.
ಆಸರೆ ಯೋಜನೆಯಡಿಯಲ್ಲಿ ನೋಂದಾಯಿಸಿ ಕೊಳ್ಳುವುದು ಹೇಗೆ?
ನೀವೇನಾದರೂ ಒಂಟಿಯಾಗಿ ಜೀವನ ನಡೆಸುತ್ತಿದ್ದರೆ, ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಆಸರೆ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಕೆಲವೊಂದು ಜಿಲ್ಲೆಗಳಲ್ಲಿ ಪೊಲೀಸರೇ ಕುದ್ದಾಗಿ ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಹೆಸರು, ವಯಸ್ಸು, ವಿಳಾಸ ಹಾಗೂ ದೊರವಾಣಿ ಸಂಖ್ಯೆಯನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ.
ಕೊನೆಯ ಮಾತು:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಆಸರೆ ಯೋಜನೆಯನ್ನು ಜಾರಿಗೊಳಿಸಿದ್ದು, ನೀವೇನಾದರೂ ಒಂಟಿಯಾಗಿ ವಾಸವಾಗಿದ್ದರೆ, ಆಸರೆ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ನಿಮ್ಮ ನಿಮ್ಮ ಮನೆಯನ್ನೇ ಗುರಿಯಾಗಿಸಿಕೊಂಡು ಮಾಡುವ ಕಳ್ಳತನ ಹಾಗೂ ದರೋಡೆ ಹಾಗೂ ದೈಹಿಕ ಕಿರುಕುಳಕ್ಕೆ ಅಂತ್ಯವನ್ನು ಹಾಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರು ಆಸರೆ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಪೊಲೀಸರು ಆಸರೆ ಯೋಜನೆ (Aasare Scheme) ಯಡಿಯಲ್ಲಿ ಒಂಟಿ ಮಹಿಳೆಯರು ಹಾಗೂ ಹಿರಿಯ ನಾಗರೀಕರ ಮನೆಗೆ ಭೇಟಿ ನೀಡಿ ಅವರಿಗೆ ಸುರಕ್ಷತೆಯನ್ನು ಒದಗಿಸುವುದು ಹಾಗೂ ಅವರಿಗೆ ಧೈರ್ಯವನ್ನು ತುಂಬುವುದು.
ಆಸರೆ ಯೋಜನೆ (Aasare Scheme) ಯನ್ನು ಜಾರಿಗೊಳಿಸಿದ ಇಲಾಖೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ.
ಅರ್ಹ ಫಲಾನುಭವಿಗಳಿಗೆ ಸಹಾಯಧನ ಸಿಗುವುದಿಲ್ಲ ಬದಲಾಗಿ ರಕ್ಷಣೆ ಸಿಗಲಿದೆ.








