Vivo KanyaGyaan Scholarship 2026 : ₹60,000 ವರೆಗೆ ಆರ್ಥಿಕ ಸಹಾಯ : ಬಂದೇ ಬಿಡ್ತು ನೋಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ!

February 18, 2026 7:45 AM
Vivo KanyaGyaan Scholarship

ಪೋಷಕರೇ,, ನಿಮ್ಮ ಮಕ್ಕಳ ಕಾಲೇಜ್ ಫೀಸ್ ಚಿಂತೆಗೆ ಇಂದೇ ಗುಡ್ ಬೈ ಹೇಳಿ!. ನಿಮ್ಮ ಮಕ್ಕಳ ಉಜ್ವಲವಾದ ಭವಿಷ್ಯವನ್ನು ರೂಪಿಸಲು “ವಿವೊ ಸಂಸ್ಥೆಯು ಸುಮಾರು ₹60,000/- ದಷ್ಟು ಸ್ಕಾಲರ್ಶಿಪ್ ಹಣವನ್ನ ಹೊತ್ತು ತಂದಿದೆ”. ನಮಸ್ಕಾರ ಕರ್ನಾಟಕ ನಮ್ಮ ಕರ್ನಾಟಕ ರಾಜ್ಯದಲ್ಲಿ ತುಂಬಾ ಚುರುಕಾಗಿ ಓದುವ ಮಕ್ಕಳಿಗೆ ಹಣದ ಕೊರತೆಯಿಂದಾಗಿ ತಮ್ಮ ಶಿಕ್ಷಣವನ್ನು ಅದಕ್ಕೆ ನಿಲ್ಲಿಸಬೇಕಾ, ಎಂದು ತಲೆಕೆಡಿಸಿಕೊಂಡು ಕೂತಿದ್ದೀರಾ? ಇನ್ನು ಈ ವಿಚಾರವಾಗಿ ನೀವು ತಲೆಕೆಡಿಸಿಕೊಳ್ಳಲೇಬೇಡಿ. “ಯಾಕೆಂದರೆ ಪ್ರತಿಷ್ಠಿತ ಕಂಪನಿಯಾದ ವಿವೊ ಸಂಸ್ಥೆಯು “ಕನ್ಯಾಜ್ಞಾನ್” ಎಂಬ ಸ್ಕಾಲರ್ಶಿಪ್ ಯೋಜನೆ ಅಡಿ ಒಬ್ಬ ವಿದ್ಯಾರ್ಥಿನಿಗೆ ಸುಮಾರು ₹60,000/- ದಷ್ಟು ಪ್ರೋತ್ಸಾಹ ಧನ ನೀಡಲು ಮುಂದಾಗಿದೆ”.

Vivo KanyaGyaan Scholarship In Kannada

Join WhatsApp

Join Now

Join Telegram

Join Now

ಹೌದು ವಿವೊ(VIVO) ಸಂಸ್ಥೆ ಇಂದ 2025-26ನೇ ಸಾಲಿನಲ್ಲಿ ಬಂದೇ ಬಿಡ್ತು ನೋಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ!. ವಿದ್ಯಾರ್ಥಿಗಳು ನಾವು ತೆಗೆದುಕೊಂಡರೆ ವಿವೋ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಬೇಕು ಎಂದು ಬಯಸುತ್ತಾರೆ ಆದರೆ ವಿವೋ ಸಂಸ್ಥೆ ಕೊಡುತ್ತಿರುವ ವಿದ್ಯಾರ್ಥಿವೇತನದ ಬಗ್ಗೆ ಸ್ವಲ್ಪನಾದರೂ ಅರಿವಿದೆಯೇ ನಿಮಗೆ ?.

ನಿಮ್ಮ ವಿದ್ಯಾಭ್ಯಾಸವನ್ನು ಉತ್ತೇಜಿಸಲು ಪ್ರತಿಷ್ಠಿತ ಕಂಪನಿಯಾದ ವಿವೋ ಪ್ರೋತ್ಸಾಹ ಧನ ಕೊಡಲು 2025-26ನೇ ಸಾಲಿನ ಆನ್ಲೈನ್ ಅರ್ಜಿಯನ್ನ ಆರಂಭ ಮಾಡಿದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಉತ್ತಮವಾಗಿ ನಡೆಸುತ್ತಿರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಯುಕೆಜಿ, ಎಲ್ ಕೆ ಜಿ ಇಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳವರೆಗೆ ಶುಲ್ಕಗಳು ಲಕ್ಷಾಂತರ ರೂಪಾಯಿ ತಲುಪುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಡೆ ನೋಡುತ್ತಿದ್ದೇವೆ.

ಇಂದಿನ ಕಾಲದ ದುರಂತ ವೇನೆಂದರೆ,,, ಪೋಷಕರು ತಮ್ಮ ಮಕ್ಕಳ ಉಜ್ವಲವಾದ ಭವಿಷ್ಯವನ್ನು ರೂಪಿಸಲು ತಮ್ಮ ಕೈಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ಯೋಚನೆ ಮಾಡದೆ, ಯಾವ ಸಂಸ್ಥೆ ಹೆಸರು ಮೇಲಿರುತ್ತದೆಯೋ ಅಂತಹ ಖಾಸಗಿ ಶಾಲಾ-ಕಾಲೇಜುಗಳಿಗೆ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಎನ್ನುವ ದೃಷ್ಟಿಯಿಂದ ಸಾಲ – ಸೂಲಾ ಮಾಡಿ ಸೇರಿಸುತ್ತಾರೆ. ಆದರೆ ಅವರಿಗೆ ಈ ಸಂಸ್ಥೆಗಳು ಶಿಕ್ಷಣವೆಂಬ ಹೆಸರಿನಲ್ಲಿ ಹಣವನ್ನ ಮಾಡಿಕೊಳ್ಳುತ್ತಿವೆ ಎನ್ನುವುದರ ಅರಿವು ಸ್ವಲ್ಪವೂ ಇರುವುದಿಲ್ಲ.


ಆದರೆ ಇಂಥ ಒಂದು ಪರಿಸ್ಥಿತಿ ಬಡ ವಿದ್ಯಾರ್ಥಿಗಳ ಮೇಲೆ ಅತಿ ದೊಡ್ಡ ಸವಾಲ್ ಆಗಿ ಪರಿಗಣಿಸಿದೆ. ಹೇಗೆಂದರೆ ಬಡವರ ಮಕ್ಕಳಲ್ಲಿ ಓದುವ ಮನಸ್ಥಿತಿ, ಛಲ ಹಾಗೆಯೆ ವಿದ್ಯೆ ಕೂಡ ಇರುತ್ತದೆ. ಆದರೆ ವಿದ್ಯಾರ್ಥಿಯ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ಬಹಳಷ್ಟು ಇರುತ್ತದೆ. ತಾನು ಓದಬೇಕು ಸಮಾಜದಲ್ಲಿ ಒಂದು ಹೆಸರನ್ನ ಮಾಡಬೇಕು ಅನ್ನುವ ಬಯಕೆ ಕೂಡ ಆ ಬಡ ವಿದ್ಯಾರ್ಥಿಯಲ್ಲಿ ಬಹಳಷ್ಟು ಇರುತ್ತದೆ. ಇಂದಿನ ಕಾಲದಲ್ಲಿಯೂ ಸಹ ಇಂತಹ ಒಂದು ಪರಿಸ್ಥಿತಿಯಿಂದಾಗಿ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಕುಟುಂಬದ ಆರ್ಥಿಕ ಕೆಟ್ಟ ಪರಿಸ್ಥಿತಿ ಇಂದ ಸಣ್ಣ ವಯಸ್ಸಿನಲ್ಲೇ ಕೆಲಸಕ್ಕೆ ಸೇರಿ ತಮ್ಮ ಶಿಕ್ಷಣದ ಮೇಲಿನ ಕನಸನ್ನೇ ತ್ಯಾಗ ಮಾಡುವ ಮಕ್ಕಳು ಅದೆಷ್ಟೋ.

ಪ್ರೋತ್ಸಾಹ ಧನದ ಬಗ್ಗೆ :- vivo KanyaGyaan Scholarship 2025-26

ವಿದ್ಯಾರ್ಥಿಗಳ ಇಂತಹ ಕೆಟ್ಟ ಪರಿಸ್ಥಿತಿಯನ್ನ ಅರಿತುಕೊಂಡ ಖಾಸಗಿ ಕಂಪನಿಗಳು ಕೆಲವೊಂದು ಮಹತ್ವದ ತೀರ್ಮಾನವನ್ನ ತೆಗೆದುಕೊಂಡು ಭಾರತ ದಂತ ದೇಶದಲ್ಲಿ ಉತ್ತಮ ಬೆಳವಣಿಗೆಯನ್ನ ಮೂಡಿಸುತ್ತಿವೆ. ಹಾಗೆ ಇಂತಹ ಸಂಸ್ಥೆಗಳು ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಜೊತೆಗೆ ಸಮಾಜದಲ್ಲಿ ಎಲ್ಲಾ ವರ್ಗದ ಮಕ್ಕಳಿಗೂ ಸಮನಾಗಿ ವಿದ್ಯಾಹತೆ ಪಡೆಯಬಹುದು. ಹಾಗೆಯೇ ಮುಂದಿನ ದಿನಗಳಲ್ಲಿ ಒಳ್ಳೆಯ ಹೆಸರು, ಗೌರವ, ಸರ್ಕಾರಿ ಅಧಿಕಾರಿ ಯಾಗುವಷ್ಟು ಬದಲಾವಣೆಯನ್ನ ಇಂತಹ ಅನೇಕ ಸಂಸ್ಥೆಗಳ ಸ್ಕಾಲರ್ಶಿಪ್ ಹಣದಿಂದ ಸಾಧ್ಯವಾಗುತ್ತದೆ.

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಮೊದಲು ಸ್ಕಾಲರ್ಶಿಪ್ ಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡ ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಈ ಕೆಳಗೆ ನೀಡಲಾಗಿದೆ. ಅದನ್ನು ತಿಳಿದುಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ವಿವೋ ಸಂಸ್ಥೆಯು ಯಾವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣವನ್ನ ನೀಡುತ್ತದೆ ? ಎಷ್ಟು ನೀಡುತ್ತದೆ ? ಹಾಗೆ ನಾವು ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು ? ಇವೆಲ್ಲವನ್ನ ಈ ಕೆಳಗೆ ನೋಡುತ್ತಾ ಹೋಗೋಣ.

ಕನ್ಯಾಜ್ಞಾನ್ ಸ್ಕಾಲರ್ಶಿಪ್ ಹೈಲೆಟ್ಸ್ ಪಾಯಿಂಟ್ಸ್ :-

ಹೈಲೆಟ್ಸ್ ಪಾಯಿಂಟ್ಸ್(highlights points)ವಿವರಣೆ (Description)
ಉದ್ದೇಶSTEM ಕ್ಷೇತ್ರದಲ್ಲಿ ಹೆಣ್ಣು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವಕಾಶ ಕಲ್ಪಿಸುವುದು
ವಿದ್ಯಾರ್ಥಿವೇತನವಾರ್ಷಿಕ ₹60,000ವರೆಗೆ
ಲಾಭಗಳುಆರ್ಥಿಕ ನೆರವು, ಮೆಂಟಾರ್ಷಿಪ್, ಕೌಶಲ್ಯಾಭಿವೃದ್ಧಿ, ಉದ್ಯಮ ಪರಿಚಯ
ಗುರಿSTEM ನಲ್ಲಿ ಹೆಣ್ಣು ಪ್ರತಿಭೆಗಳ ಅವಕಾಶ ಮತ್ತು ವೃದ್ಧಿ
ಅರ್ಜಿ ವಿಧಾನvivo India ಅಥವಾ CSR/Scholarship ಅಧಿಕೃತ ವೆಬ್‌ಸೈಟ್ ಮೂಲಕ
ಟಿಪ್ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸಿ, ಅರ್ಜಿ ಲಿಂಕ್ ಹೊರಬಂದ ತಕ್ಷಣ ಸಲ್ಲಿಸಿ

ಸಂಕ್ಷಿಪ್ತ ಮಾಹಿತಿ :-

ವಿವೋ ಸಂಸ್ಥೆಯ “ವಿವೋ ಕನ್ಯಾ ಜ್ಞಾನ” ಎಂಬ ಹೆಸರಿನಡಿ ವಿದ್ಯಾರ್ಥಿನಿಯರಿಗೆ ಸುಮಾರು 60 ಸಾವಿರ ವರೆಗೆ ಸಹಾಯಧನವನ್ನು ನೀಡುತ್ತಿದ್ದು, ಶಿಕ್ಷಣ ಮತ್ತು ವೃತ್ತಿ ಜೀವನವನ್ನು ಮುಂದುವರೆಸಲು ಯುವತಿಯರನ್ನ ಸಬಲೀಕರಣ ಗೊಳಿಸುವುದೇ Scholarship ನ ಪ್ರಮುಖ ಉದ್ದೇಶ. ವಿದ್ಯಾರ್ಥಿನಿಯರು STEM ಅಂದರೆ (Science, Technology, Engineering, Mathematics) ಕ್ಷೇತ್ರದಲ್ಲಿ UG ಅಥವಾ PG ವಿದ್ಯಾರ್ಥಿನಿ ಆಗಿದ್ದಲ್ಲಿ ಮಾತ್ರ Scholarship ಹಣ ಪಡೆಯಲು ಸಾಧ್ಯ . ಇಂತಹ ಪ್ರತಿಷ್ಠಿತ ಕಂಪನಿಗಳು ನೀಡುವ ಸ್ಕಾಲರ್ಶಿಪ್ ಮಾತರಿಂದ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಲು ಪ್ರೇರೇಪಿಸುತ್ತದೆ.

ವಿವೋ ಕನ್ಯಾ ಜ್ಞಾನ ಕಾರ್ಯಕ್ರಮವನ್ನು ಮೊದಲ ಬಾರಿ 2023 ರಲ್ಲಿ ಆರಂಭ ಮಾಡಿರುವಂತದ್ದು. ಇದು ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಅಂದರೆ “ಎಸ್ ಟಿ ಈ ಎಂ” ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಬೆಂಬಲ ನೀಡುವ ಉದ್ದೇಶದಿಂದ ವಿವೋ ಕಂಪನಿಯ “ಸಿ ಎಸ್ ಆರ್” ಯೋಜನೆಯಾಗಿ ಶುರುವಾಯಿತು. ನಂತರ 2025 ರಲ್ಲಿ ಮಹಿಳಾ ದಿನದ ಸಂದರ್ಭದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಮತ್ತು ಗಮನ ಹರಿಸಲಾಯಿತು ಎಂದು ಹೇಳಲಾಗಿದೆ. ಆದರೆ ಇದು ಇತ್ತೀಚಿಗೆ ಶುರುವಾಗಿರುವಂತಹ ಯೋಜನೆ ಅಲ್ಲ ಸುಮಾರು 2023ರಲ್ಲಿ ಯೋಜನೆಕಾರಿಯಾಗಿರುವಂಥದ್ದು.

ಮುಂದಿನ ಹಂತದಲ್ಲಿ ಈ ಸ್ಕೊಲಶಿಪ್ ನ ಬಗ್ಗೆ ಸಂಪೂರ್ಣವಾಗಿ ತಿಳ್ಸ್ಕೊತಾ ಹೋಗ್ತೀನಿ ಬನ್ನಿ…

ನಿಮ್ಮಲ್ಲಿ ಇರಬೇಕಾದ ವಿದ್ಯಾರ್ಹತೆ :-

ಯಾವುದೇ ಒಂದು ಪ್ರೋತ್ಸಹದನವನ್ನ ನೀವು ಪಡೆಯಲು ಕಡ್ಡಾಯವಾಗಿ ವಿದ್ಯಾರ್ಹತೆಯನ್ನ ಹೊಂದಿರಬೇಕಾಗುತ್ತದೆ. ಹಾಗಿದ್ರೆ VIVO ಸಂಸ್ಥೆ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಯಾವ ವಿದ್ಯಾರ್ಹತೆ ಹೊಂದಿರಬೇಕು ಇನ್ನುವ ಮಾಹಿತಿ ಈ ಕೆಳಗಿದೆ.

STEM ವಿಭಾಗಉದಾಹರಣೆ ಕೋರ್ಸ್ / Examples
Science(ವಿಜ್ಞಾನ)Physics, Chemistry, Biology, Biotechnology, Environmental Science
Technology (ತಂತ್ರಜ್ಞಾನ)Computer Science, IT, Data Science, AI, Cyber Security
Engineering (ಇಂಜಿನಿಯರಿಂಗ್)Mechanical, Civil, Electrical, Electronics & Communication, Computer Engineering
Mathematics (ಗಣಿತ)Pure Mathematics, Applied Mathematics, Statistics, Actuarial Science

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿವೋ ಸಂಸ್ಥೆಯಿಂದ ಸಿಗುವ ಸ್ಕಾಲರ್ಶಿಪ್ ನ ಮೊತ್ತ ಎಷ್ಟು ಗೊತ್ತಾ ?

  • ಯಾವುದೇ STEM ಕೋರ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಹಾಕಬಹುದು.
  • ನೀನೇನಾದರೂ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಿದರೆ ಸುಮಾರು ₹60 ಸಾವಿರ ವರೆಗೂ ಒಬ್ಬ ವಿದ್ಯಾರ್ಥಿನಿಕಾಲರ್ಶಿಪ್ ಮೊತ್ತವನ್ನ ಪಡೆಯಬಹುದು

ವಿವೋ ಕಂಪನಿಯು ಯಾವ ರೀತಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡುತ್ತದೆ :-

ಆತ್ಮೀಯ ವಿದ್ಯಾರ್ಥಿಗಳೇ ನೀವು ಈ ವಿವೋ ಸಂಸ್ಥೆಯ ಸ್ಕಾಲರ್ಶಿಪ್ ಮೊತ್ತವನ್ನ ಪಡೆಯಲು ಈ ಕೆಳಗಿನ ಆಯ್ಕೆ ವಿಧಾನದಲ್ಲಿ ಪಾಲುದಾರರಾಗಬೇಕಾಗುತ್ತದೆ.

  • ವಿದ್ಯಾರ್ಥಿ ವೇತನದಲ್ಲಿ ಆಯ್ಕೆ ಹೇಗೆ ನಡೆಯುತ್ತದೆ ಎಂದರೆ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿ ಫಾರಂ, ಕೋರ್ಸ್, ದಾಖಲೆಗಳು ಮತ್ತು ಶೈಕ್ಷಣಿಕ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲಾಗುತ್ತದೆ.
  • ನಂತರ ವಿದ್ಯಾರ್ಥಿನಿಯ ಅಂಕಗಳು, ಪರೀಕ್ಷೆ ಫಲಿತಾಂಶಗಳು ಹಾಗೆ ಸಾಧನೆ ಪ್ರಾಥಮಿಕ ಎಲ್ಲವನ್ನ ಗಮನಿಸಿ ಪ್ರಾಥಮಿಕದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • ನಂತರ ಕೆಲ ಸಂದರ್ಭದಲ್ಲಿ ಫೈನಾನ್ಸಿಯಲ್ ಕೂಡ ಆಯ್ಕೆ ಮಾಡುವಲ್ಲಿ ಪರಿಗಣಿಸಲಾಗುತ್ತದೆ.
  • ಸಂಬಂಧಿತ ಸಮಿತಿ ಆಯ್ಕೆಯ ಅಂತಿಮ ತೀರ್ಮಾನದ ನಂತರ ಕೊನೆಯಲ್ಲಿ ಆಯ್ಕೆಯಾದವರಿಗೆ ಅಧಿಕೃತವಾಗಿ ಇ-ಮೇಲ್ ಅಥವಾ ವೆಬ್ಸೈಟ್ ಮೂಲಕ ಸೆಲೆಕ್ಷನ್ ಇಂಫಾರ್ಮೇಷನ್ ವಿದ್ಯಾರ್ಥಿಗಳ ಫೋನ್ ಗೆ ಬರುತ್ತದೆ.

ಯಾರು ಅರ್ಹರು ? ನಾವು ಅರ್ಜಿ ಸಲ್ಲಿಸಬಹುದೇ ?

  • ಹೆಣ್ಣು ಮಕ್ಕಳು ಮಾತ್ರ ಇ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಅವಕಾಶ ಇರುವಂಥದ್ದು
  • ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾಥಮೆಟಿಕ್ಸ್ ಕೋರ್ಸ್ ನಲ್ಲಿ ಓದುವವರು ಯುಜಿ ಅಥವಾ ಪಿಜಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶ
  • ಭಾರತದ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ದಾಖಲೆ ಇದ್ದವರು ಮಾತ್ರ ಅರ್ಹರಾಗಿರುತ್ತಾರೆ
  • ಶಿಕ್ಷಣ ಸಾಧನೆ ಯಲ್ಲಿ ಉತ್ತಮ ಮತ್ತು ಮೆರಿಟ್ ಇರಬೇಕು
  • ಕೆಲವೊಮ್ಮೆ ವಿವೋ ಸಂಸ್ಥೆಯು ಆರ್ಥಿಕ ಅಗತ್ಯ ಇದ್ದರೆ ಪರಿಗಣಿಸಲಾಗುತ್ತದೆ.

ನಾವು ಅರ್ಜಿ ಸಲ್ಲಿಸಬಹುದೇ ?

  • ನೀವು ಹೆಣ್ಣುಮಕ್ಕಳಾಗಿದ್ದರೆ ಎಸ್ ಟಿ ಈ ಎಂ ಕೋರ್ಸ್ ಓದುತ್ತಿದ್ದರೆ ಮತ್ತು ಮೇಲಿನ ಅರ್ಹತೆಗಳನ್ನ ಪೂರೈಸಿದರೆ ಅರ್ಜಿಯನ್ನ ಸಲ್ಲಿಸಬಹುದು.
  • ಇಲ್ಲಿ ಇತರೆ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇರುವುದಿಲ್ಲ ಆದರೂ ಸಹ ಅರ್ಜಿ ಹಾಕಲು ಅವಕಾಶ ಇರುತ್ತದೆ

ಅಗತ್ಯ ದಾಖಲೆಗಳು :-

  • ಆರ್ಥಿಕ ಸ್ಥಿತಿ ದಾಖಲೆ (Income Certificate – ಬೇಕಾದರೆ)
  • ಅಂಕಪತ್ರ / Transcript (ಇತ್ತೀಚಿನ ಶೈಕ್ಷಣಿಕ ದಾಖಲೆ)
  • ಅರ್ಜಿ ಫಾರ್ಮ್ (Online / Download)
  • STEM ಗೆ ಸಂಬಂಧಿತ ಸಾಧನೆ/ಪ್ರಾಜೆಕ್ಟ್ ಪ್ರಮಾಣಪತ್ರಗಳು (ಆಪ್ಷನಲ್)
  • ಕಾಲೇಜು / ವಿಶ್ವವಿದ್ಯಾಲಯ ದಾಖಲೆ (Enrollment Certificate)
  • ಗುರುತಿನ ದಾಖಲೆ (Aadhaar Card, Passport, ಅಥವಾ College ID)

ಮುಖ್ಯ ಸಲಹೆ :-

  • ವಿದ್ಯಾರ್ಥಿಗಳು ವಿವೋ ಕನ್ಯಾ ಗ್ಲಾಂಡ್ ಸ್ಕಾಲರ್ಶಿಪ್ ಲಿಂಕ್ ಬಂದ ತಕ್ಷಣವೇ ಅರ್ಜಿಯನ್ನು ಸಲ್ಲಿಸಿ
  • ಅಂಗಪತ್ರ ಕಾಲೇಜು, ಪ್ರಮಾಣ ಪತ್ರ, ಐಡಿ ಪ್ರೂಫ್ ಎಲ್ಲವನ್ನು ಸಿದ್ಧ ಮಾಡಿಟ್ಟುಕೊಳ್ಳಿ
  • ನಿಮ್ಮ ಶೈಕ್ಷಣಿಕ ಸಾಧನೆ ಪರ್ಸೆಂಟೇಜ್ ಅಥವಾ ಜಿಪಿಎ ಪ್ರಮಾಣ ಪ್ರಾಮಾಣಿಕವಾಗಿ ದಾಖಲಿಸಿ ಅರ್ಜಿ ಫಾರಂ ಅನ್ನ ಸರಿಯಾಗಿ ಓದಿಕೊಂಡು ಭರ್ತಿ ಮಾಡುತ್ತಾ ಬನ್ನಿ
  • ನಿಮ್ಮ ಅಚೀವ್ಮೆಂಟ್, ಪ್ರಾಜೆಕ್ಟ್ ಅಥವಾ ಎಸ್‌ಟಿಇಎಮ್ ಅನುಭವವನ್ನು ಸ್ಪಷ್ಟವಾಗಿ ವಿವರಿಸಿ.

ಅರ್ಜಿ ಸಲ್ಲಿಸುವ ವಿಧಾನ :-

  • ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ (vivo India CSR / Scholarship portal) ಭೇಟಿ ನೀಡಿ.
  • ಅರ್ಜಿ ಫಾರಂನಲ್ಲಿ ವೈಯಕ್ತಿಕ, ಶೈಕ್ಷಣಿಕ ಮತ್ತು ಎಸ್ ಟಿ ಈ ಎಂ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿ
  • ನಂತರದಲ್ಲಿ ನಿಮ್ಮ ಅಂಕಪಟ್ಟಿ ಕಾಲೇಜು ಪ್ರಮಾಣ ಪತ್ರ ಐಡಿ ಆರ್ಥಿಕ ದಾಖಲೆಗಳನ್ನು ಸ್ಕಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಿ.
  • ಅರ್ಜಿಯನ್ನ ಪರಿಪೂರ್ಣವಾಗಿ ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಿ
  • ಅರ್ಜಿ ಭರ್ತಿ ಮಾಡಿ Submit / ಸಲ್ಲಿಸಿ button ಮೇಲೆ ಕ್ಲಿಕ್ ಮಾಡಬೇಕು.
  • ಅರ್ಜಿ ಸಬ್ಮಿಟ್ ಆದ ಬಳಿಕ, ವೆಬ್‌ಸೈಟ್ ಒಂದು confirmation message ಅಥವಾ reference number ನೀಡುತ್ತದೆ.

ಕೊನೆಯ ಮಾತು :-

ವಿದ್ಯಾರ್ಥಿಗಳೇ ನೀವು ಸಹ ವಿವೋ ಕಂಪನಿಯ ಕೊಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ಸಲ್ಲಿಸಬೇಕು ಅಂದ್ರೆ ಈ ಮೇಲೆ ತಿಳಿಸಿರುವ ಎಲ್ಲ ಮಾಹಿತಿನ ಸರಿಯಾಗಿ ಓದಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕುಗಳನ್ನು ಈ ಮೇಲೆ ತಿಳಿಸಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ 60 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ.


ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:

STEM ಕ್ಷೇತ್ರದಲ್ಲಿ UG/PG ಓದುತ್ತಿರುವ ಹೆಣ್ಣು ವಿದ್ಯಾರ್ಥಿನಿಯರು ಅರ್ಹರು.

ಮೆರಿಟ್ ಮತ್ತು ದಾಖಲೆ ಪರಿಶೀಲನೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

Science, Technology, Engineering, Mathematics (STEM) ಕೋರ್ಸ್‌ಗಳಿಗೆ ಮಾತ್ರ ಲಭ್ಯ.

ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Shivappa MA

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಶಿವಪ್ಪ ಎಂಎ. ನಾನು ಬಿಎ ಪದವೀಧರನಾಗಿದ್ದು ವೃತ್ತ ಪತ್ರಿಕೆ ಹಾಗೂ ಮಲ್ನಾಡ್ ನ್ಯೂಸ್.in ಸಂಸ್ಥಾಪಕನಾಗಿದ್ದೇನೆ ಸುದ್ದಿ ಮಾಧ್ಯಮ ರಂಗದಲ್ಲಿ ದಶಕದ ಉದ್ದಗಲ ಅನುಭವ ಹೊಂದಿದ್ದೇನೆ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳದಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ವಾಹಿನಿಗಳ ಸುದ್ದಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಸ್ಥಳೀಯ ಸುದ್ದಿಗಳನ್ನು ಸಮಗ್ರತೆಯಿಂದ ಪ್ರಸರಿಸುವುದು ಸುದ್ದಿಯ ನಿಖರತೆ ಹಾಗೂ ಗುಣಮಟ್ಟಕ್ಕೆ ಅಗ್ರಸ್ಥಾನವನ್ನು ನೀಡುತ್ತೇನೆ, ವರದಿಯಲ್ಲಿ ವೈಯಕ್ತಿಕ ಅಭಿಪ್ರಾಯ ಪ್ರವೇಶಿಸದಂತೆ ಸಂಯಮ ಬೀರುವುದು ಪಾವತಿಗೆ ಬದಲಾಗಿ ಸುದ್ದಿ ನೀಡುವ ಪದ್ಧತಿ ಹೊಸ ವಿಚಾರಗಳು, ಸ್ಥಳೀಯ ಸುದ್ದಿ ಮಾಹಿತಿಗಳು ನಿಷ್ಠಾವಂತ ಸುದ್ದಿ ಸೇವೆ ಸಾಕಾರಗೊಳ್ಳುವಂತೆ ಮಾಡುತ್ತೇನೆ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿದ್ದು ಓದುಗರಿಗೆ ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ತಲುಪಿಸುತ್ತೇನೆ ಇದಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- Gmail :- malnadnews833@gmail.com Website :- www.malnadnews.in

Join WhatsApp

Join Now

Join Telegram

Join Now

Leave a Comment