Hosanagara News : ಹೊಸ ನಗರದ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುವ ಶ್ರೀ ಕ್ಷೇತ್ರ ಮಾರಿಕಾಂಬಾ ದೇವಿಯ 2026 ನೇ ಸಾಲಿನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಾಗುತ್ತಿದೆ, ದೇವಿಯು ತನ್ನ ಗಂಡನ ಮನೆಯಿಂದ ತವರು ಮನೆಗೆ ಬರುವ ಧಾರ್ಮಿಕ ವಿಧಿ ವಿಧಾನಗಳು ಬಹಳ ಭಕ್ತಿಯಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ ಪತಿಯಮನೆಗೆ ಆಗಮನ.
ಹೊಸನಗರದ ದ್ಯಾವರ್ಸ ಎಂಬಲ್ಲಿರುವ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಮಾರಿಯಮ್ಮನವರ ತವರು ಮನೆ ಇದೆ ಮಾರಿಯಮ್ಮನವರ ತವರು ಮನೆ ಎಂದೇ ಕರೆಯಲಾಗುವ ಈ ಸ್ಥಳ, ಜಾತ್ರೆಯ ಮೊದಲ ದಿನದಂದು ದೇವಿಯನ್ನು ಸುಂದರವಾಗಿ ಅಲಂಕರಿಸಿ ಗಂಡನ ಮನೆಗೆ ಶೋಭ ಯಾತ್ರೆಯ ಮೂಲಕ ತವರುಮನೆಯಿಂದ ಕರೆ ತರಲಾಗುತ್ತದೆ ಈ ಅವಧಿಯಲ್ಲಿ ಬಂದು ಭಕ್ತರಿಗೆ ದರ್ಶನ ನೀಡುವ ಸಂಭ್ರಮದ ಸಂಕೇತವಾಗಿದೆ.
ಧಾರ್ಮಿಕ ವಿಧಿಗಳು:
ಗಂಡನ ಮನೆಗೆ ಆಗಮಿಸಿದ ದೇವಿಗೆ ಸುಮಂಗಲಿಯರು ‘ಉಡಿ ತುಂಬುವ’ ಕಾರ್ಯಕ್ರಮ ನಡೆಸುತ್ತಾರೆ. ಬಾಗಿನ ಅರ್ಪಣೆ ಮತ್ತು ವಿಶೇಷ ಪೂಜೆಗಳ ಮೂಲಕ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ.
ದಿನನಿತ್ಯದ ಪೂಜೆ:
ವಿಸರ್ಜನೆ:
ಒಂಬತ್ತು ದಿನಗಳ ಕಾಲ ಪತಿಯ ಮನೆಯಲ್ಲಿ ನೆಲೆಸುವ ದೇವಿ, ಜನವರಿ 28ರಂದು ಮತ್ತೆ ಶಾಸ್ತ್ರೋಕ್ತವಾಗಿ ಅಲ್ಲಿಂದ ಬೀಳ್ಕೊಡುಗೆ ಪಡೆದು ತನ್ನ ಮೂಲ ಸ್ಥಾನಕ್ಕೆ ಮರಳುತ್ತಾಳೆ.











