Gruhalakshmi Mahila Bank : ರೂ 3ಲಕ್ಷ ಹಣ । ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್‌ ಸದಸ್ಯತ್ವ ಪಡೆಯೋದು ಹೇಗೆ?

February 18, 2026 1:50 PM
Gruhalakshmi Mahila Sahakari Bank

Join WhatsApp

Join Now

Join Telegram

Join Now

ಇಂದಿನ ಕಾಲದಲ್ಲಿ ಬಡ್ಡಿ ಬಿಗ್ಗಾಡಿ, ಬ್ಯಾಂಕುಗಳ ಕಟ್ಟು ಪಾಡು, ದಾಖಲೆಗಳಂತ ಹೊರೆ ಸಾಮಾನ್ಯ ಮನುಷ್ಯರಿಗೆ ಸಾಲ ಪಡೆಯುವುದೇ ಒಂದು ದೊಡ್ಡ ಯುದ್ದ ಆಗಿಬಿಟ್ಟಿದೆ. ಆದರೆ ನಮ್ಮ ನೆಲದ, ನಮ್ಮ ಕನಸುಗಳನ್ನೇ ಅರ್ಥ ಮಾಡಿಕೊಂಡು ಸಹಾಯ ಮುಂದುವರಿಸುವಂತಹ ಒಂದು ಹೊಚ್ಚ ಹೊಸ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅದೇ ಗೃಹಲಕ್ಷ್ಮಿ ಮಹಿಳಾ ಸಹಕಾರ ಬ್ಯಾಂಕು ಹೌದು ಈ ಸಹಕಾರ ಬ್ಯಾಂಕ್ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಉದ್ಯಮವನ್ನು ಶುರು ಮಾಡಲು ಸಾಲ ಸೌಲಭ್ಯ ನೀಡಲಾಗುತ್ತದೆ.

Gruhalakshmi Mahila Sahakari Bank

ಯಾವ ರೀತಿ ಇದಕ್ಕೆ ನೊಂದಾಯಿಸಿಕೊಳ್ಳುವುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ, ಎಲ್ಲಾ ಮಾಹಿತಿಯನ್ನು ಓದಿಕೊಂಡು ನೀವು ಸಹ ಈ ಈ ಬ್ಯಾಂಕ್ ಖಾತೆಯನ್ನು ತೆರೆಯಬಹುದು ಇದೇ ರೀತಿಯ ಹೊಸ ಹೊಸ ಯೋಜನೆಗಳಿಗಾಗಿ ನಮ್ಮ ಮಲ್ನಾಡ್ ನ್ಯೂಸ್ ವೆಬ್ ಸೈಟಿಗೆ ಭೇಟಿ ನೀಡುತ್ತಿರಿ.


ಈ ಸಂಸ್ಥೆಯ ಬಗ್ಗೆ ಮಾಹಿತಿ :

ಗೃಹ ಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಇದನ್ನು ( ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ) ಅನ್ನುವಂತ ಹೆಸರಿನಿಂದಲೂ ಕರೆಯುತ್ತಾರೆ. ಕರ್ನಾಟಕ ಸರ್ಕಾರ ಮಹಿಳೆಯರಿಗಾಗಿಯೇ ಹೊಚ್ಚ ಹೊಸದಾಗಿ ಜಾರಿಗೆ ತಂದಿರುವಂತಹ ಒಂದು ಯೋಜನೆ ಇದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಲಾದ ಒಂದು ಯೋಜನೆ ಇದಾಗಿದ್ದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಆರ್ಥಿಕವಾಗಿ ನೆರವು ನೀಡಿ ಅವರ ಜೀವನವನ್ನು ಅವರ ಜೀವನಕ್ಕೆ ಸ್ವಾವಲಂಬನೆಯನ್ನು ನೀಡುವ ಉದ್ದೇಶದಿಂದ 3 ಲಕ್ಷದವರೆಗೆ ವೈಯಕ್ತಿಕ ಸಾಲ ನೀಡುವ ಉದ್ದೇಶವನ್ನ ಹೊಂದಿದೆ. ಸದಸ್ಯರಾಗಲು 1000 ಸಾವಿರ ಶೇರುದಾರರಾಗಿ ಸೇರಿ ಮಾಸಿಕ 200 ರೂ ಕಂತಿನಂತೆ ಪಾವತಿ ಮಾಡಬೇಕಾಗುತ್ತದೆ ಈ ಬ್ಯಾಂಕಿನ ಮುಖ್ಯ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವುದಾಗಿರುವಂಥದ್ದು.

ಸದಸ್ಯತ್ವ ಪಡೋದು ಹೇಗೆ? (Membership)

ಗೃಹ ಲಕ್ಷ್ಮಿ ಮಹಿಳಾ ಸಹಕಾರ ಬ್ಯಾಂಕ್ ಇದರ ಸದಸ್ಯತ್ವ ಪಡೆಯಲು ಕೆಲವೊಂದು ಅಗತ್ಯ ಅರ್ಹತೆ ನಿಮ್ಮಲ್ಲಿ ಇರಬೇಕಾಗುತ್ತದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಇದರ ಸದಸ್ಯತ್ವ ಪಡೆಯುವ ಮಹಿಳಾ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳಿ.

ನಿಮ್ಮ ಸಮೀಪದ ಗೃಹಲಕ್ಷ್ಮಿ ಬ್ಯಾಂಕ್ ಶಾಖೆಗೆ ಹೋಗಿ ಸದಸ್ಯತ್ವಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಅವರು ನಿಮಗೆ ಒಂದು ಸರಳವಾದ ಅರ್ಜಿ ಪ್ರತಿಯನ್ನು ಕೊಡುತ್ತಾರೆ ಅದನ್ನ ಭರ್ತಿ ಮಾಡಿ ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ 1 ಸಾವಿರ ಡೆಪೋಸಿಟ್ ಮಾಡಿ ನೊಂದಣಿ ಮಾಡಿಕೊಳ್ಳಬೇಕು.

ಅರ್ಜಿ ತುಂಬುವ ವಿಧಾನ:

  • ನಿಮ್ಮ ಪೂರ್ತಿ ಹೆಸರು (ತಂದೆ ಅಥವಾ ಗಂಡನ ಹೆಸರು )
  • ಪೂರ್ತಿ ವಿಳಾಸ (ತಪ್ಪಿಲ್ಲದಂತೆ ನಮೂದಿಸಿ)
  • ಜನ್ಮ ದಿನಾಂಕ
  • ಉದ್ಯೋಗದ ಹೆಸರು
  • ವಾರ್ಷಿಕ ಆದಾಯದ ಅಂದಾಜು
  • ಕೊನೆಯಲ್ಲಿ ನಿಮ್ಮ ಸಹಿ ಮಾಡಿ ಅರ್ಜಿ ಪ್ರತಿಯನ್ನು ಬ್ಯಾಂಕಿಗೆ ಕೊಡಬೇಕು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಆಧಾರ್ ಕಾರ್ಡ್
  • ವಿಳಾಸದ ಪುರಾವೆ
  • ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಸದಸ್ಯತ್ವ ಕಾರ್ಡ್:

ಬ್ಯಾಂಕ್ ಸದಸ್ಯತ್ವ ಪಡೆದ ಸ್ವಲ್ಪ ದಿನಗಳಲ್ಲಿ ನಿಮ್ಮ ಹೆಸರು ಬ್ಯಾಂಕಿನ ರಿಜಿಸ್ಟರ್ ನಲ್ಲಿ ನೋಂದಾಯಿಸಿಕೊಳ್ಳಲಾಗುತ್ತದೆ

ನಿಮಗೆ ಒಂದು ಸದಸ್ಯತ್ವದ ಸಂಖ್ಯೆ ಮತ್ತು ಕಾರ್ಡ್ ಕೊಡ್ತಾರೆ

ಇದರಿಂದ ನೀವು ಗೃಹಲಕ್ಷ್ಮಿ ಕುಟುಂಬದ ಒಬ್ಬ ಪ್ರಮುಖ ಸದಸ್ಯರಾಗಿ ಪ್ರತಿ ತಿಂಗಳು 200 ರೂ ಗಿಂತ ಕಡಿಮೆ ಇಲ್ಲದಂತೆ ಹಣವನ್ನ ಸಂದಾಯ ಮಾಡುತ್ತಾ ಹೋಗಬೇಕು.

ಏನೇನು ಸಾಲ ಸೌಲಭ್ಯ ಇದೆ?

ಸ್ವಂತ ಉದ್ಯಮ ಶುರು ಮಾಡಲು , ಗೃಹ ಸಾಲ ಸೇರಿದಂತೆ ಮನೆ ಕಟ್ಟಲು, ಮನೆ ಖರೀದಿ ಮಾಡಲು ರಿಪೇರಿ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಣೆ ಮಾಡಲಾಗುತ್ತದೆ.

ಯಾಕೆ ಗೃಹಲಕ್ಷ್ಮಿ ಬ್ಯಾಂಕ್ ಬೆಸ್ಟ್?

  • ಕಡಿಮೆ ಬಡ್ಡಿದರ
  • ಸ್ಥಳೀಯ ತಿಳುವಳಿಕೆ
  • ಬ್ಯಾಂಕುಗಳ ಪ್ರಾಧಾನ್ಯತೆ
  • ಹಿಡನ್ ಚಾರ್ಜಸ್ ಇಲ್ಲದೆ ಇರುವುದು
  • ಸದಸ್ಯರಿಗೆ ಉತ್ತಮ ಸೇವೆ

ಜಾಗರೂಕತೆ!

ಯಾವುದೇ ಸಹಕಾರಿ ಸಂಘ ಅಥವಾ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯವನ್ನು ತೆಗೆದುಕೊಂಡಲ್ಲಿ ಸರಿಯಾದ ಸಮಯದಲ್ಲಿ ಅದನ್ನ ತೀರಿಸದೇ ಇದ್ದರೆ ನಿಮಗೆ ಆರ್ಥಿಕವಾಗಿ ಇನ್ನಷ್ಟು ಹೊರೆಯಾಗಬಹುದು, ಹಾಗೆ ನಿಮ್ಮ ಸಿಬಿಲ್ ಸ್ಕೋರ್ (CIBIL) ಕಡಿಮೆ ಆಗಬಹುದು, ಮುಂದಿನ ದಿನಗಳಲ್ಲಿ ಇದರಿಂದ ನಿಮಗೆ ಯಾವುದೇ ಸಾಲ ಸೌಲಭ್ಯ ಸರಿಯಾಗಿ ಸಿಗದೇ ಇರುವ ಪರಿಸ್ಥಿತಿ ಉಂಟಾಗಬಹುದು ಯಾವುದೇ ಸಾಲವನ್ನು ಪಡೆಯುವುದಕ್ಕಿಂತ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಿ ಜಾಗರೂಕತೆಯಿಂದ ಸಾಲವನ್ನು ಪಡೆದು ಅದನ್ನ ಉತ್ತಮ ಕೆಲಸಕ್ಕೆಸದುಪಯೋಗಪಡಿಸಿಕೊಳ್ಳಿ.

ಅಂತಿಮ ಮಾತು:

ಗೃಹ ಲಕ್ಷ್ಮಿ ಮಹಿಳಾ ಸಹಕಾರ ಬ್ಯಾಂಕ್ ಎಂಬುದು ಕೇವಲ ಹಣದ ವ್ಯವಹಾರದ ಸಂಸ್ಥೆಯೆಲ್ಲ ಇದು ನಂಬಿಕೆಯ ಬೇರು ಸಹಾಯದ ಕೈ ,ಸಮುದಾಯದ ಆತ್ಮ ,ಮಲೆನಾಡಿನ ಹಸಿರು ತೋಪಿನಂತೆ ಇದು ಸ್ಥಳೀಯರ ಬೆಳವಣಿಗೆಗೆ ನೀರೆರೆಯುತ್ತದೆ ಹಾಗಾಗಿ ಆರ್ಥಿಕ ಬೆಂಬಲ ಬೇಕಾದಾಗ ದೂರದ ಬಹುರಾಷ್ಟ್ರೀಯ ಬ್ಯಾಂಕುಗಳ ಕಡೆ ಕಣ್ಣು ಹಾಯಿಸುವ ಬದಲು ನಿಮ್ಮ ಎದುರುಗಡೆಯೇ ಇರುವ ನಿಮ್ಮ ಸಂಕಟವನ್ನು ಅರ್ಥ ಮಾಡಿಕೊಳ್ಳುವ ಈ ಸಹಕಾರಿ ಬ್ಯಾಂಕ್ ನಿಮ್ಮ ಜೀವನವು ಇನ್ನಷ್ಟು ಸುಗಮವಾಗಿ ಸಾಗುತ್ತದೆ.

ಇದನ್ನು ಓದಿರಿ :- ಅಡಿಕೆ ಧಾರಣೆ

Shivappa MA

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಶಿವಪ್ಪ ಎಂಎ. ನಾನು ಬಿಎ ಪದವೀಧರನಾಗಿದ್ದು ವೃತ್ತ ಪತ್ರಿಕೆ ಹಾಗೂ ಮಲ್ನಾಡ್ ನ್ಯೂಸ್.in ಸಂಸ್ಥಾಪಕನಾಗಿದ್ದೇನೆ ಸುದ್ದಿ ಮಾಧ್ಯಮ ರಂಗದಲ್ಲಿ ದಶಕದ ಉದ್ದಗಲ ಅನುಭವ ಹೊಂದಿದ್ದೇನೆ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳದಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ವಾಹಿನಿಗಳ ಸುದ್ದಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಸ್ಥಳೀಯ ಸುದ್ದಿಗಳನ್ನು ಸಮಗ್ರತೆಯಿಂದ ಪ್ರಸರಿಸುವುದು ಸುದ್ದಿಯ ನಿಖರತೆ ಹಾಗೂ ಗುಣಮಟ್ಟಕ್ಕೆ ಅಗ್ರಸ್ಥಾನವನ್ನು ನೀಡುತ್ತೇನೆ, ವರದಿಯಲ್ಲಿ ವೈಯಕ್ತಿಕ ಅಭಿಪ್ರಾಯ ಪ್ರವೇಶಿಸದಂತೆ ಸಂಯಮ ಬೀರುವುದು ಪಾವತಿಗೆ ಬದಲಾಗಿ ಸುದ್ದಿ ನೀಡುವ ಪದ್ಧತಿ ಹೊಸ ವಿಚಾರಗಳು, ಸ್ಥಳೀಯ ಸುದ್ದಿ ಮಾಹಿತಿಗಳು ನಿಷ್ಠಾವಂತ ಸುದ್ದಿ ಸೇವೆ ಸಾಕಾರಗೊಳ್ಳುವಂತೆ ಮಾಡುತ್ತೇನೆ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿದ್ದು ಓದುಗರಿಗೆ ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ತಲುಪಿಸುತ್ತೇನೆ ಇದಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- Gmail :- malnadnews833@gmail.com Website :- www.malnadnews.in

Join WhatsApp

Join Now

Join Telegram

Join Now

Leave a Comment