Hosanagara Marikamba Jatre : ಹೊಸನಗರದ ಐತಿಹಾಸಿಕ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಭರ್ಜರಿಯಾಗಿ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು 20 ಜನವರಿ 2026 ರಿಂದ ಆರಂಭವಾಗುವ ಮಾರಿ ಜಾತ್ರೆ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
ಪ್ರತಿ ವರ್ಷ ಸಾವಿರಾರು ಭಕ್ತರು:
ಪ್ರತಿವರ್ಷದಂತೆ ಈ ವರ್ಷವೂ ಸಹ ಸಾವಿರಾರು ಭಕ್ತರುಗಳು ಬಂದು ದೇವರ ಆಶೀರ್ವಾದವನ್ನು ಪಡೆಯಲಿದ್ದಾರೆ, ಜಾತ್ರಾ ಮಹೋತ್ಸವವನ್ನು ಈ ಬಾರಿಯೂ ಇನ್ನಷ್ಟು ಅದ್ದೂರಿಯಾಗಿ ನಡೆಯಲಿದ್ದು ಧಾರ್ಮಿಕ ಆಚರಣೆಗಳ ಜೊತೆಗೆ ಮನರಂಜನಾ ಕಾರ್ಯಕ್ರಮಗಳಿಗೆ ವಿಶೇಷವಾದ ಒತ್ತನ್ನ ನೀಡಲಾಗಿದೆ ಜಾತ್ರೆಯ ಅವಧಿಯಲ್ಲಿ ಪ್ರತಿದಿನ ದೇವಿಯ ವಿಶೇಷ ಪೂಜೆ , ಅಲಂಕಾರ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಮನರಂಜನ ಕಾರ್ಯಕ್ರಮಗಳು:
ಭಕ್ತರ ಮನರಂಜನೆಗಾಗಿ ಈ ಬಾರಿ ಆರ್ಕೆಸ್ಟ್ರಾ ಕಾರ್ಯಕ್ರಮಗಳು, ವೈವಿಧ್ಯಮಯಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಯುವ ಜನತೆಯನ್ನು ಆಕರ್ಷಿಸುವಂತೆ ಬ್ರೇಕ್ ಡ್ಯಾನ್ಸ್ ಜಾಯಿಂಟ್ ವಿಲ್, ಕೊಲಂಬಸ್ ಆಟ ಸೇರಿದಂತೆ ಹಲವಾರು ಆಧುನಿಕ ಆಟೋಪಕರಣಗಳು ಜಾತ್ರಾ ಮೈದಾನದಲ್ಲಿ ಸಿದ್ಧವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಮನರಂಜನೆಯ ಸೌಲಭ್ಯ ಇಲ್ಲಿ ಸಿಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಅಂಗಡಿ ಮುಂಗ್ಗಟುಗಳು & ಆಹಾರ ಮಳಿಗೆಗಳು:
ಜಾತ್ರಾ ಮೈದಾನದಲ್ಲಿ ಅಂಗಡಿ ಮುಂಗ್ಗಟುಗಳು , ಆಹಾರ ಮಳಿಗೆಗಳು, ಆಟಿಕೆ ಅಂಗಡಿಗಳು ಈಗಾಗಲೇ ಸಜ್ಜಾಗುತ್ತಿದ್ದು ಜಾತ್ರೆ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸುರಕ್ಷತೆ, ಸ್ವಚ್ಛತೆ ಮತ್ತು ಸಂಚಾರ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಹೊಸನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಮಾತ್ರವಲ್ಲದೆ ದೂರದ ಊರಿಂದಲೂ ಸಹ ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು 2026ನೆಯ ಸಾಲಿನ ಮಾರಿಕಾಂಬ ಜಾತ್ರೆ ವಿಶಿಷ್ಟವಾಗಿ ಮೂಡಿ ಬರುವ ಎಲ್ಲಾ ವಿಶ್ವಾಸಗಳು ವ್ಯಕ್ತವಾಗಿವೆ.
ಇದನ್ನು ಓದಿರಿ :- ಇಂದು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?









